ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲುಕಾಕು ಮೇಲೆ ಎಲ್ಲರ ಕಣ್ಣು

ಇಂದು ಬೆಲ್ಜಿಯಂ–ಟ್ಯುನಿಷಿಯಾ ಹಣಾಹಣಿ
Last Updated 22 ಜೂನ್ 2018, 17:37 IST
ಅಕ್ಷರ ಗಾತ್ರ

ಮಾಸ್ಕೊ: ನಾಕೌಟ್‌ ಪ್ರವೇಶಿಸುವ ಕನಸು ಕಾಣುತ್ತಿರುವ ಬೆಲ್ಜಿಯಂ ತಂಡ ಈ ಹಾದಿಯಲ್ಲಿ ಮಹತ್ವದ ಹೋರಾಟಕ್ಕೆ ಸಜ್ಜಾಗಿದೆ.

ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಜಿ’ ಗುಂಪಿನ ಪೈಪೋಟಿಯಲ್ಲಿ ಏಡನ್‌ ಹಜಾರ್ಡ್‌ ಸಾರಥ್ಯದ ಬೆಲ್ಜಿಯಂ ತಂಡ ಟ್ಯುನಿಷಿಯಾ ಎದುರು ಸೆಣಸಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ಮೊದಲ ಹಣಾಹಣಿಯಲ್ಲಿ ಹಜಾರ್ಡ್‌ ಪಡೆ 3–0 ಗೋಲುಗಳಿಂದ ಪನಾಮ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಎರಡು ಗೋಲು ಗಳಿಸಿದ್ದ ರೊಮೆಲು ಲುಕಾಕು ಈಗ ಎಲ್ಲರ ಆಕರ್ಷಣೆಯಾಗಿದ್ದಾರೆ.

ರಾಬರ್ಟೊ ಮಾರ್ಟಿನೆಜ್‌ ಗರಡಿಯಲ್ಲಿ ಪಳಗಿರುವ ಬೆಲ್ಜಿಯಂ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಡ್ರಿಯಾಸ್‌ ಮೆರ್ಟೆನ್ಸ್‌, ಪನಾಮ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಥಾಮಸ್‌ ವರ್ಮಲೆನ್‌, ವಿನ್ಸೆಂಟ್‌ ಕೊಂಪನಿ, ಥಾಮಸ್‌ ಮೆಯುನಿರ್‌ ಅವರ ಮೇಲೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಮಿಡ್‌ಫೀಲ್ಡರ್‌ಗಳಾದ ಆ್ಯಕ್ಸೆಲ್‌ ವಿಟ್‌ಸೆಲ್‌, ಕೆವಿನ್‌ ಡಿ ಬ್ರ್ಯೂನ್‌, ಥೋರ್ಗನ್‌ ಹಜಾರ್ಡ್‌, ಮೌಸಾ ಡೆಂಬೆಲ್‌ ಮತ್ತು ನೇಸರ್‌ ಚಾಡ್ಲಿ ಅವರೂ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಡಲು ಕಾತರರಾಗಿದ್ದಾರೆ.

ಟ್ಯುನಿಷಿಯಾ ಕೂಡಾ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT