ಬೆಂಗಳೂರು: ಸಮಬಲದ ಹೋರಾಟ ನೀಡಿದ ರೂಟ್ಸ್ ಎಫ್ಸಿ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ಎದುರಾಳಿ ಕಿಕ್ಸ್ಟಾರ್ಟ್ ಎಫ್ಸಿ ತಂಡದ ವಿರುದ್ಧ 1–1 ಗೋಲಿನೊಂದಿಗೆ ಡ್ರಾ ಮಾಡಿಕೊಂಡಿದೆ.

ಅಶೋಕನಗರದ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫುಟ್ಬಾಲ್ ಪಂದ್ಯದಲ್ಲಿ ರೂಟ್ಸ್ ಎಫ್ಸಿ ತಂಡದ ಗೌತಮ್ ರಾಜೇಶ್ (11ನೇ ನಿ.) ಮತ್ತು ಕಿಕ್ಸ್ಟಾರ್ಟ್ ತಂಡದ ಸಿದ್ದಾರ್ಥ್ ನೊಂಗ್ಮಿಕಾಪಾಮ್ (45+ 3ನಿ.) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆನ್ಡೆಂಟ್ಸ್ ಎಫ್ಸಿ 2–1 ಗೋಲುಗಳಿಂದ ಎಎಸ್ಸಿ ಮತ್ತು ಸೆಂಟರ್ ಎಫ್ಸಿ ತಂಡವನ್ನು ಮಣಿಸಿತು. ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್ಸಿ ತಂಡದ ಪ್ರದೀಪ್ ಆರ್. (34ನೇ ನಿ.) ಮತ್ತು ಪ್ರಶಾಂತ್ ಎಚ್. (88ನೇ ನಿ) ಗೋಲುಗಳನ್ನು ಬಾರಿಸಿದರು. ಎಎಸ್ಸಿ ಸ್ಕೋರರ್ ತಂಡದ ವಾಹೆನ್ಂಗ್ಬಾಮ್ ನೀರಜ್ ಸಿಂಗ್ (90ನೇ ನಿ.) ಒಂದು ಗೋಲು ಹೊಡೆದರು.

ಬಿ ಡಿವಿಷನ್ ಲೀಗ್ ಪಂದ್ಯ

ಸಾಯ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಇಂಡಿಯಾ ಎಫ್ಸಿ ತಂಡ 2–1 ಗೋಲುಗಳಿಂದ ಮೊಹಮ್ಮದನ್ ಸ್ಫೋರ್ಟಿಂಗ್ ಎಫ್ಸಿ ತಂಡವನ್ನು ಪರಾಭವಗೊಳಿಸಿತು. ಸೌತ್ ಇಂಡಿಯಾ ತಂಡದ ನಥೇನ್ ಡಿ‘ಸೋಜಾ (42ನೇ ನಿ.), ಜಿತೆನ್ ಗುಪ್ತಾ (63ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಮೊಹಮ್ಮದನ್ ಸ್ಫೋರ್ಟಿಂಗ್ ತಂಡದ ಸಮರ್ಥ್ ಎಸ್. ಭಾಂಡೇಕರ್ (47ನೇ ನಿ.) ಗೋಲು ಬಾರಿಸಿದರು.

ಎರಡನೇ ಪಂದ್ಯದಲ್ಲಿ ಜೂನೊ ಎಫ್ಸಿ ತಂಡ 5–0 ಗೋಲುಗಳಿಂದ ಬೆಂಗಳೂರು ವಾರಿಯರ್ಸ್ ಎಫ್ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಜೂನೊ ಎಫ್ಸಿ ತಂಡ ಟಿ. ಪ್ರೇಮ್ಕಿಶನ್ ಸಿಂಗ್ (13ನೇ ನಿ.), ಪೃಥ್ವಿ (33ನೇ ನಿ.) ಮತ್ತು ರಾಜಿಲ್ (40ನೇ ನಿ.), ಒಸ್ಬರ್ಟ್ ಲೂಹಿಸ್ ಫೆರ್ನಾನ್ಬ್ಡ್ಸ್ (47ನೇ ನಿ.), ಮಹೇಶ್ ಎಂ. (64ನೇ ನಿ.) ಗೋಲು ಹೊಡೆದರು.

ಮೂರನೇ ಪಂದ್ಯದಲ್ಲಿ ವೆಹಿಕಲ್ಸ್ ಎಫ್ಸಿ ತಂಡ 5–2 ಗೋಲುಗಳಿಂದ ಇನ್ಫೈನೆಟ್ ಬೆಳಗಾವಿ ಎಫ್ಸಿ ತಂಡವನ್ನು ಮಣಿಸಿತು.

ಅರ್ಬನೈಸ್ ಡೌಲಾತ್ ನಾಕೌಟ್ ಟೂರ್ನಿಯಲ್ಲಿ ಲಾ ಮಾಸಿಯಾ ಎಫ್ಸಿ 5–2 ಗೋಲುಗಳಿಂದ ಯುಎಫ್ಎ ಎಫ್ಸಿ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.