ಮಂಗಳವಾರ, ಸೆಪ್ಟೆಂಬರ್ 21, 2021
23 °C

Tokyo Olympics: ಫುಟ್‌ಬಾಲ್‌- ಅಮೆರಿಕ ಮಹಿಳಾ ತಂಡದ ಜಯಭೇರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮೆಗಾನ್ ರಪಿನೊ ಮತ್ತು ಗೋಲ್‌ಕೀಪರ್ ಅಲಿಸಾ ನಹೆರ್ ಅವರ ಅಮೋಘ ಆಟದ ಬಲದಿಂದ ಅಮೆರಿಕ ಮಹಿಳಾ ತಂಡ ಒಲಿಂಪಿಕ್ಸ್‌ನ ಮಹಿಳಾ ಫುಟ್‌ಬಾಲ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಜಯ ಗಳಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2–2ರ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಕಿಕ್ ಮೊರೆ ಹೋಗಬೇಕಾಯಿತು. ಅಮೆರಿಕ 4–2ರಲ್ಲಿ ಜಯ ಗಳಿಸಿತು.

18ನೇ ನಿಮಿಷದಲ್ಲಿ ಗೋಲು ಗಳಿಸಿದ ಮೆಡೀಮಾ ಅವರು ನೆದರ್ಲೆಂಡ್ಸ್‌ಗೆ ಮುನ್ನಡೆ ಗಳಿಸಿಕೊಟ್ಟರು. 28ನೇ ನಿಮಿಷದಲ್ಲಿ ಮೀವಿಸ್‌ ಗೋಲು ಗಳಿಸಿ ಅಮೆರಿಕಕ್ಕೆ ಸಮಬಲ ಗಳಿಸಿಕೊಟ್ಟರು. 31ನೇ ನಿಮಿಷದಲ್ಲಿ ವಿಲಿಯಮ್ಸ್ ಗೋಲಿನೊಂದಿಗೆ ಅಮೆರಿಕ ಮುನ್ನಡೆ ಗಳಿಸಿತು. 54ನೇ ನಿಮಿಷದಲ್ಲಿ ಮೆಡೀಮಾ ಮತ್ತೊಮ್ಮೆ ಮಿಂಚಿದರು. 

ಸ್ಯಾಮ್ ಕೆರ್ ಗಳಿಸಿದ ಎರಡು ಗೋಲುಗಳ ಬಲದಿಂದ ಬ್ರಿಟನ್ ವಿರುದ್ಧ ಆಸ್ಟ್ರೇಲಿಯಾ 4–3ರ ಜಯ ಸಾಧಿಸಿತು. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು