ಮಂಗಳವಾರ, ಮಾರ್ಚ್ 21, 2023
20 °C

ವಿಶ್ವಕಪ್ ಹಾಕಿ ಫೈನಲ್‌| ಪ್ರಶಸ್ತಿಗಾಗಿ ಬೆಲ್ಜಿಯಂ–ಜರ್ಮನಿ ಹಣಾಹಣಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ್‌: ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವು ಭಾನುವಾರ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿ ಎದುರು ಸೆಣಸಲಿದೆ.

ಈ ಹಿಂದೆ ವಿಶ್ವಕಪ್ ಟೂರ್ನಿಗಳಲ್ಲಿ ಜರ್ಮನಿ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಒಂದರ ಹಿಂದೆ ಒಂದರಂತೆ ಪ್ರಶಸ್ತಿ ಗೆದ್ದಿರುವ ಇತಿಹಾಸ ಇದೆ. ಈಗ ಆ ಸಾಲಿಗೆ ಸೇರುವ ಅವಕಾಶ ಬೆಲ್ಜಿಯಂ ತಂಡಕ್ಕೂ ಇದೆ. ಕಳೆದ ಬಾರಿ (2018)  ಚಾಂಪಿಯನ್ ಆಗಿದ್ದ ಬೆಲ್ಜಿಯಂ 2021ರಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನ ಕೂಡ ಜಯಿಸಿತ್ತು. 

ಈ ವರ್ಷದ ಟೂರ್ನಿಯಲ್ಲಿಯೂ ಅಮೋಘ ಆಟವಾಡಿದೆ. ಈ ತಂಡದಲ್ಲಿರುವ 11 ಆಟಗಾರರು 30 ವರ್ಷ ಮತ್ತು ಮೂವರು 35 ವರ್ಷ ದಾಟಿರುವವರಾಗಿದ್ದಾರೆ. ಈ ತಂಡವು ಬೆಲ್ಜಿಯಂ ಹಾಕಿ ಇತಿಹಾಸದ ಬಂಗಾರದ ಪೀಳಿಗೆ ಎಂದೇ ಪ್ರಖ್ಯಾತವಾಗಿದೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುವ ಬಲಾಢ್ಯ ತಂಡ ಇದಾಗಿದೆ. 

ಎರಡು ಬಾರಿಯ ಚಾಂಪಿಯನ್ (2002 ಹಾಗೂ 2006)  ಈ ಸಲದ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಶೂಟೌಟ್‌ನಲ್ಲಿ ರೋಚಕ ಜಯಸಾಧಿಸಿತ್ತು. ಛಲದ ಆಟಕ್ಕೆ ಹೆಸರಾಗಿರುವ ಜರ್ಮನಿಯು ಚಾಂಪಿಯನ್ ಬೆಲ್ಜಿಯಂಗೆ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು