ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಜ್ಯೋತಿ ಹಿಡಿಯಲಿರುವ 90 ವರ್ಷದ ಮಾಜಿ ಯೋಧ 

Published 29 ಮೇ 2024, 0:14 IST
Last Updated 29 ಮೇ 2024, 0:14 IST
ಅಕ್ಷರ ಗಾತ್ರ

ಬಡಿಯಾನಾ, ಸೆನೆಗಲ್: 90 ವರ್ಷ ವಯಸ್ಸಿನ ಸೆನೆಗಲ್‌ನ ಮಾಜಿ ಯೋಧ ಓಮರ್ ಡೈಮ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಯ ಭಾಗವಾಗಿ ಕ್ರೀಡಾ ಜ್ಯೋತಿ ಹಿಡಿದು ಸಾಗಲಿದ್ದಾರೆ. 

ಡೈಮ್‌ ಅವರು ಎರಡು ವಿಶ್ವ ಯುದ್ಧಗಳು ಮತ್ತು ವಿವಿಧ ವಸಾಹತು ವಿಮೋಚನೆ ಹೋರಾಟಗಳ ಸಮಯದಲ್ಲಿ ಫ್ರಾನ್ಸ್‌ಗಾಗಿ ಹೋರಾಡಿದ ಆಫ್ರಿಕನ್ ಪದಾತಿದಳದ ಪಡೆಯಲ್ಲಿದ್ದರು.

‘ಅದೃಷ್ಟಶಾಲಿಗಳಲ್ಲಿ ನಾನು ಒಬ್ಬ. ನಾನು ಮಾತ್ರ ಬದುಕುಳಿದಿದ್ದೇನೆ. ಒಲಿಂಪಿಕ್ ಜ್ಯೋತಿ ಹಿಡಿಯಲು ನನ್ನನ್ನು ಆಯ್ಕೆ ಮಾಡಿದ್ದು ಪವಾಡ’ ಎಂದು ಅವರು ಹೇಳಿದರು.  

ಡೈಮ್ ಈ ಮೊದಲು ಒಲಿಂಪಿಕ್ ಜ್ಯೋತಿ ಬಗ್ಗೆ ಕೇಳಿರಲಿಲ್ಲ, ಆದರೆ ಅವರು ಒಪ್ಪಿಕೊಂಡರು.

ಡೋಪಿಂಗ್: ಥಿಯಾಗೊಗೆ ನಿಷೇಧ

ಮೊನಾಕೊ: ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಒಲಿಂಪಿಕ್‌ ಪೋಲ್‌ ವಾಲ್ಟ್ ಚಿನ್ನದ ಪದಕ ವಿಜೇತ ಥಿಯಾಗೊ ಬ್ರಾಜ್ ಅವರನ್ನು 16 ತಿಂಗಳ ಕಾಲ ನಿಷೇಧಿಸಲಾಗಿದೆ. ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಟ್ರಾಕ್ ಮತ್ತು ಫೀಲ್ಡ್‌ ಅಥ್ಲೆಟಿಕ್ಸ್ ಸಮನ್ವಯ ಘಟಕ ತಿಳಿಸಿದೆ. 

2016 ರಲ್ಲಿ ತವರಿನಲ್ಲಿ ನಡೆದ ರಿಯೋ ಡಿ ಜನೈರೊ ಕ್ರೀಡಾಕೂಟದಲ್ಲಿ ಬ್ರಾಜ್ ಚಿನ್ನದ ಪದಕ ಮತ್ತು ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

30 ವರ್ಷದ ಬ್ರಾಜ್ ಅವರ ನಿಷೇಧವು ನವೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಎಐಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT