ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಟೂರ್ನಿ: ಪ್ರಜ್ಞಾನಂದ ವಿರುದ್ಧ ಸೋಲು ತಪ್ಪಿಸಿಕೊಂಡ ಸೊ

ಸಿಂಕ್ವೆಫೀಲ್ಡ್‌ ಕಪ್‌
Published : 24 ಆಗಸ್ಟ್ 2024, 14:43 IST
Last Updated : 24 ಆಗಸ್ಟ್ 2024, 14:43 IST
ಫಾಲೋ ಮಾಡಿ
Comments

ಸೇಂಟ್‌ ಲೂಯಿ (ಅಮೆರಿಕ): ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಆರ್‌. ಅವರು ಉತ್ತಮ ಲಯದಲ್ಲಿದ್ದಂತೆ ಕಾಣುತ್ತಿಲ್ಲ. ಪಂದ್ಯಗಳಲ್ಲಿ ಮೇಲುಗೈ ಸಾಧಿಸುತ್ತಿದ್ದರೂ ಅದನ್ನು ಗೆಲುವಾಗಿ ಪರಿವರ್ತಿಸಲು ಎಡವುತ್ತಿದ್ದಾರೆ. ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯಲ್ಲಿ ಶುಕ್ರವಾರ ಐದನೇ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ವಿರುದ್ಧ ಅಂಥ ಕೆಲವು ಅವಕಾಶಗಳನ್ನು ತಪ್ಪಿಸಿಕೊಂಡ ಅವರು ಅಂತಿಮವಾಗಿ ‘ಡ್ರಾ’ಕ್ಕೆ ಸಹಿಹಾಕಿದರು.

ಒಂದೆಡೆ ಸೊ ಸೋಲಿನಿಂದ ಬಚಾವಾದರೆ, ಇನ್ನೊಂದು ಪಂದ್ಯದಲ್ಲಿ ಸಮಬಲದ ಸ್ಥಿತಿಯಲ್ಲಿದ್ದಾಗ ಡಚ್‌ ಆಟಗಾರ ಅನಿಶ್ ಗಿರಿ ಎಸಗಿದ ಲೋಪದಿಂದ ಫ್ರಾನ್ಸ್‌ನ ಆಟಗಾರ ಅಲಿರೇಜಾ ಫಿರೋಜ್ ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿ ಆದರು.

ಐದನೇ ಸುತ್ತಿನಲ್ಲಿ ನಿರ್ಣಾಯಕ ಫಲಿತಾಂಶ ಬಂದಿದ್ದು ಗಿರಿ– ಅಲಿರೇಜಾ ಪಂದ್ಯದಲ್ಲಿ ಮಾತ್ರ. ಪ್ರಜ್ಞಾನಂದ– ಸೋ ಪಂದ್ಯವೂ ಸೇರಿ ಉಳಿದ ನಾಲ್ಕು ಪಂದ್ಯಗಳು ‘ಡ್ರಾ’ ಆದವು.

ಗೆಲುವಿನಿಂದ ಅಲಿರೇಜಾ ಅವರು ಒಟ್ಟಾರೆ ಮೂರುವರೆ ಪಾಯಿಟ್ಸ್‌ ಸಂಗ್ರಹಿಸಿದ್ದು ಅಗ್ರಸ್ಥಾನದಲ್ಲಿದ್ದಾರೆ. ಸೊ (3 ಪಾಯಿಂಟ್) ಎರಡನೇ ಸ್ಥಾನದಲ್ಲಿದ್ದಾರೆ. ಆರು ಮಂದಿ ಆಟಗಾರರು ತಲಾ ಎರಡೂವರೆ ಪಾಯಿಂಟ್ಸ್‌ ಗಳಿಸಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನ, ಇಯಾನ್‌ ನಿಪೊಮ್‌ನಿಯಾಷಿ, ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ಡಿಂಗ್‌ ಲಿರೆನ್‌, ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಈ ಆರು ಮಂದಿ. ಅಬ್ದುಸತ್ತಾರೋವ್ (2) ಒಂಬತ್ತನೇ ಸ್ಥಾನದಲ್ಲಿದ್ದು, ಅನಿಶ್‌ ಗಿರಿ (1.5) ಕೊನೆಯ ಸ್ಥಾನದಲ್ಲಿದ್ದಾರೆ.

ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಅವರು ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ‘ಡ್ರಾ’ ಮಾಡಿಕೊಂಡರು. ಮೊದಲ ಬೋರ್ಡ್‌ನಲ್ಲಿ ಕರುವಾನ, ಫ್ರಾನ್ಸ್‌ನ ಲಗ್ರಾವ್‌ ಜೊತೆ ‘ಡ್ರಾ’ಕ್ಕೆ ಸಹಿಮಾಡಿದರು.

ನಿಪೊಮ್‌ನಿಯಾಷಿ, ಹಾಲಿ ವಿಶ್ವ ಚಾಂಪಿಯನ್‌ ಡಿಂಗ್‌ ಲಿರೆನ್‌ ಜೊತೆ ಪಾಯಿಂಟ್‌ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT