ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಸಾದಾ ಶೈಲಿಯಲ್ಲಿ ಬೆಳ್ಳಿಗೆ ಗುರಿಯಿಟ್ಟ ಟರ್ಕಿಯ ಶೂಟರ್‌

Published : 2 ಆಗಸ್ಟ್ 2024, 23:31 IST
Last Updated : 2 ಆಗಸ್ಟ್ 2024, 23:31 IST
ಫಾಲೋ ಮಾಡಿ
Comments

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನ ಶೂಟಿಂಗ್‌ ಸ್ಪರ್ಧೆಯಲ್ಲಿ ತುಂಬಾ ಸಾದಾ ಶೈಲಿಯಲ್ಲಿ ಪಾಲ್ಗೊಂಡು ಬೆಳ್ಳಿಗೆ ಗುರಿಯಿಟ್ಟ ಟರ್ಕಿಯ 51 ವರ್ಷ ವಯಸ್ಸಿನ ಶೂಟರ್ ಯೂಸುಫ್ ಡಿಕೆಕ್ ಅವರಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

ಸ್ಪರ್ಧೆಯ ವೇಳೆ ಸಾಮಾನ್ಯವಾಗಿ ಶೂಟರ್‌ಗಳು ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಿಖರತೆಗಾಗಿ ಅತ್ಯಾಧುನಿಕ ಕನ್ನಡಕ ಮತ್ತು ಹೊರಗಿನ ಶಬ್ದ ಕೇಳಿಸದಂತೆ ಇಯರ್ ಡಿಫೆಂಡರ್ ಬಳಸುತ್ತಾರೆ. ಜೊತೆಗೆ ಶೂಟಿಂಗ್​ಗಾಗಿಯೇ ವಿನ್ಯಾಸಗೊಳಿಸಿರುವ ರಕ್ಷಾಕವಚ ಬಳಸಿ ಸ್ಪರ್ಧೆಗೆ ಇಳಿಯುತ್ತಾರೆ. ಆದರೆ, ಡಿಕೆಕ್‌ ಅವರು ಅದನ್ನೆಲ್ಲ ಬಿಟ್ಟು ಟೀ ಶರ್ಟ್‌ ಧರಿಸಿ, ಸಾಮಾನ್ಯ ಕನ್ನಡಕದ ಹಾಕಿಕೊಂಡು ಒಂದು ಕೈಯನ್ನು ಜೇಬಿನಲ್ಲಿಸಿ ನಿಖರವಾಗಿ ಗುರಿಯಿಟ್ಟಿದ್ದರು.

ಮಂಗಳವಾರ ನಡೆದ 10 ಮೀ ಏರ್‌ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸೆವಾಲ್ ಇಲಾಯದಾ ತರಾನ್ ಅವರೊಂದಿಗೆ ಸ್ಪರ್ಧಿಸಿದ ಡಿಕೆಟ್‌ ಬೆಳ್ಳಿ ಪದಕ ಗೆದ್ದಿದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್‌ ಮತ್ತು ಸರಬ್ಜೋತ್ ಸಿಂಗ್ ಕಂಚು ಜಯಿಸಿದ್ದರು. ಸರ್ಬಿಯಾದ ಜೋಡಿ ಚಿನ್ನ ಗೆದ್ದಿತ್ತು.

2008ರಲ್ಲಿ ಮೊದಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿದ್ದ ಡಿಕೆಕ್ ಅವರಿಗೆ ಇದು 5ನೇ ಆವೃತ್ತಿಯಾಗಿದೆ. ಆದರೆ ಇದು ಅವರ ಮೊದಲ ಒಲಿಂಪಿಕ್ಸ್ ಪದಕವಾಗಿದೆ. ಈ ವಯಸ್ಸಿನಲ್ಲೂ ಅವರ ಏಕಾಗ್ರತೆಗೆ ಮೆಚ್ಚುಗೆ ವ್ಯಕ್ತವಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT