ಆಧುನಿಕ ಕಾಲದಲ್ಲೂ ಕುಟುಂಬ ವ್ಯವಸ್ಥೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ದಿಸೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಕಾರ್ಯನಿರ್ವಹಿಸುತ್ತಿದೆ. ಈ ಉತ್ಸವಕ್ಕೆ ಈಗ ಬೆಳ್ಳಿಯ ಬೆಡಗು. ಈಚೆಗಷ್ಟೇ ಮಡಿಕೇರಿಯಲ್ಲಿ ನಡೆದ ಈ ಉತ್ಸವ ವರ್ಲ್ಡ್ವೈಡ್ ಬುಕ್ ಆಫ್ ರೆಕಾರ್ಡ್ಗೂ ಸೇರಿತು.

ಕೊಡಗು ಎಂದರೆ ಮನದಲ್ಲಿ ಆಹ್ಲಾದಕರ ಭಾವಗಳು ಸಾಲುಗಟ್ಟುತ್ತವೆ. ಮನಮೋಹಕ ಬೆಟ್ಟಗುಡ್ಡಗಳು, ಕಾಫಿಯ ಘಮಲು, ಕಿತ್ತಳೆಯ ಸೊಗಡು, ಉಮ್ಮತ್ತಾಟ್ ನೃತ್ಯದ ಸೊಬಗು, ಓಲಗದ ಮಾಧುರ್ಯ, ಕೋವಿ ಹಿಡಿದ ವೀರರು, ಸೇನೆಯ ಶಿಸ್ತು ಮತ್ತು ಹಾಕಿ ಕ್ರೀಡೆಯ ರೋಮಾಂಚನ ಇತ್ಯಾದಿಗಳು ವಿಜೃಂಭಿಸುತ್ತವೆ. ಇವೆಲ್ಲವೂ ಕೊಡವರ ಪಾಲಿಗೆ ಪರಂಪರೆಯಷ್ಟೇ ಅಲ್ಲ; ಉಸಿರಿನಲ್ಲಿಯೇ ಬೆರೆತುಹೋಗಿರುವ ಸಂಗತಿಗಳು. ಮನೆಗೊಬ್ಬ ಸೈನಿಕ ಮತ್ತು ಹಾಕಿಪಟು ಇರುವ ಜಿಲ್ಲೆ ಇದು.

ಇಂದಿನ ಆಧುನಿಕ ಕಾಲದಲ್ಲಿಯೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಪ್ರಯತ್ನವನ್ನು ಕೊಡವರು ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಹಾಕಿ ಕ್ರೀಡೆ.

1997ರಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬವು ಈ ನಿಟ್ಟಿನಲ್ಲಿ ತಕ್ಕಮಟ್ಟಿಗೆ ಸಫಲವೂ ಆಗಿದೆ. ಅಂದು 60 ತಂಡಗಳೊಂದಿಗೆ ಆರಂಭವಾದ ಉತ್ಸವ ಇದು. ವಿರಾಜಪೇಟೆಯ ಸಮೀಪದ ಕರಾಡಾದಲ್ಲಿ ಪಾಂಡಂಡ ಹಾಕಿ ಉತ್ಸವ ನಡೆದಿತ್ತು. ಕರ್ನಾಟಕದ ಹಾಕಿ ರೆಫರಿ ಆಗಿದ್ದ ಪಾಂಡಂಡ ಕುಟ್ಟಪ್ಪ ಮತ್ತು ಅವರ ಸಹೋದರ ಕಾಶಿ ಪೊನ್ನಪ್ಪ ಅವರ ಕನಸಿನ ಕೂಸು ಈ ಕೊಡವ ಕೌಟುಂಬಿಕ ಹಾಕಿ. ಈಗ ಈ ಕೂಟಕ್ಕೆ ಜಾಗತಿಕ ದಾಖಲೆಯ ಗೌರವ ಒಲಿದಿದೆ. ಈ ಬಾರಿ ಕೂಟವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿತ್ತು. ಮುದ್ದಂಡ ಕುಟುಂಬವು ಆತಿಥ್ಯ ವಹಿಸಿತ್ತು.

‘ಈ ಬಾರಿ 396 ತಂಡಗಳು ಭಾಗವಹಿಸಿದ್ದವು. ಇಲ್ಲಿಯವರೆಗೂ 360 ತಂಡಗಳ ಭಾಗವಹಿಸುವಿಕೆಯ ದಾಖಲೆ ಇತ್ತು. ಈ ಹಿಂದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಮೂರು ಬಾರಿ ಸೇರಿತ್ತು. ಅಲ್ಲದೇ ಒಂದು ಸಲ ಗಿನ್ನೀಸ್ ದಾಖಲೆಯ ಗೌರವ ಕೂಡ ದೊರೆತಿದೆ. ಈ ಮೊದಲು ಟೂರ್ನಿಯನ್ನು ಆಯೋಜಿಸಿದ ಕುಟುಂಬಗಳು ಈ ಸಾಧನೆಗೆ ಕಾರಣ. ನಾವು ಆ ಪರಂಪರೆಯನ್ನು ಮುಂದುವರಿಸಿದ್ದು ಹೆಮ್ಮೆಯ ಸಂಗತಿ. ಹಾಕಿ ಉತ್ಸವ ಕೇವಲ ಕ್ರೀಡಾ ಚಟುವಟಿಕೆ ಮಾತ್ರವಲ್ಲ. ಒಂದು ಸಾಂಸ್ಕೃತಿಕ ಪರಂಪರೆಯಾಗಿಯೂ ಬೆಳೆಯುತ್ತಿದೆ. ಈ ಸಲ ₹ 3.2 ಕೋಟಿ ಖರ್ಚು ಮಾಡಲಾಗಿದೆ’ ಎಂದು ಸಂಘಟನೆಯ ನೇತೃತ್ವ ವಹಿಸಿದ್ದ ಮುದ್ದಂಡ ಸುಬ್ಬಯ್ಯ ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಈ ಬಾರಿಯ ಕೂಟದ ವೈಶಿಷ್ಟ್ಯಗಳನ್ನು ಅವರು ವಿವರಿಸಿದರು.

ಟೂರ್ನಿಯ ಆಯೋಜನೆಗೆ ವರ್ಷಪೂರ್ತಿ ಸಿದ್ಧತೆಗಳು ನಡೆಯುತ್ತವೆ. ಈ ಸಲ 25ನೇ ಕೂಟವಾಗಿದ್ದರಿಂದ ವಿಶೇಷವಾಗಿ ನಡೆಸುವ ಯೋಚನೆಯೂ ಇತ್ತು. ಅದಕ್ಕಾಗಿ ಕೆಲವೊಂದು ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಯಿತು. ಒಲಿಂಪಿಕ್ ಕೂಟದ ಮಾದರಿಯಲ್ಲಿ ಕ್ರೀಡಾಜ್ಯೋತಿಯ ಸಂಚಾರ ಏರ್ಪಡಿಸಲಾಯಿತು. ಕೌಟುಂಬಿಕ ಹಾಕಿ ಆರಂಭಿಸಿದ ಕುಟುಂಬದ ಮನೆಯಿಂದ ಆರಂಭವಾಗಿ ಕೊಡಗು ಜಿಲ್ಲೆಯ ಎಲ್ಲ ಭಾಗಗಳಲ್ಲಿಯೂ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಸುಮಾರು 138 ಕಿಲೋಮೀಟರ್ ನಡೆದ ಈ ಓಟದಲ್ಲಿ ಪ್ರತಿದಿನವೂ ಹಲವು ಜನರು ಭಾಗವಹಿಸಿದ್ದರು. ಆದರೆ ಅದರಲ್ಲಿ ಓಟವನ್ನು ಪೂರ್ಣಗೊಳಿಸಿದವರು ಆರು ಜನರು ಮಾತ್ರ. ಅವರನ್ನು ಕಾರ್ಯಕ್ರಮದ ಕೊನೆಯಲ್ಲಿ ಗೌರವಿಸಿ, ಪ್ರಶಸ್ತಿ ನೀಡಲಾಯಿತು ಎಂದು ಸುಬ್ಬಯ್ಯ ವಿವರಿಸಿದರು.

ಈ ಕೂಟದಲ್ಲಿ ಮಂಡೆಪಂಡ ಕುಟುಂಬ ಪ್ರಶಸ್ತಿ ಗೆದ್ದಿತು. ಚಾಂದಂಡ ಕುಟುಂಬವು ರನ್ನರ್ಸ್ ಅಪ್ ಆಯಿತು. ಚಾಂದಂಡ ಸುಬ್ಬಯ್ಯ ಅವರು ವೈಯಕ್ತಿಕ ಸಮಗ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

‘ಹಾಕಿಯ ಜೊತೆಗೆ ಕೊಡಗಿನ ಸಂಸ್ಕೃತಿ ಮತ್ತು ಉಳಿದ ಕ್ರೀಡೆಗಳಿಗೂ ಉತ್ತೇಜನ ನೀಡುವ ಉದ್ದೇಶ ನಮ್ಮದು. ಕೊಡಗು ಜಿಲ್ಲೆಯು ಹಾಕಿ, ಫುಟ್ಬಾಲ್, ಟೆನಿಸ್, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಪ್ರತಿಭೆಗಳನ್ನು ನೀಡಿದೆ. ಅವರಲ್ಲಿ ಅನೇಕರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ. ಆದ್ದರಿಂದ ಈ ಬಾರಿ ಶೂಟಿಂಗ್ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಕೊಡವರ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಯಿಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಇವುಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ವರ್ಷದಿಂದ ವರ್ಷಕ್ಕೆ ಈ ಉತ್ಸವವು ವಿಸ್ತಾರಗೊಳ್ಳುತ್ತಿದೆ ಮತ್ತು ಸಮೃದ್ಧವೂ ಆಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಜನಪ್ರಿಯತೆ ಪಡೆಯುತ್ತಿದೆ. ಭಾರತ ಹಾಕಿ ತಂಡದ ಮಾಜಿ ನಾಯಕ ಸರದಾರ್ ಸಿಂಗ್ ಅವರು ಈ ಬಾರಿ ಉತ್ಸವಕ್ಕೆ ಭೇಟಿ ನೀಡಿದ್ದರು. ಬಹಳ ಆಸಕ್ತಿಯಿಂದ ವೀಕ್ಷಿಸಿದರು. ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದೂ ಅವರು ಹೇಳಿದರು.

ಕೊಡವ ಪರಂಪರೆ ಮತ್ತು ಕೊಡವರ ಜೀವನಶೈಲಿಯಲ್ಲಿ ಕೋವಿ, ಉಡಗತ್ತಿ ಮತ್ತು ಪೋಷಾಕುಗಳಿಗೆ ಬಹಳ ಮಹತ್ವ ಇದೆ. ಆದ್ದರಿಂದ ಈ ಬಾರಿ ಶೂಟಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ 198 ಸ್ಪರ್ಧಿಗಳು ಭಾಗವಹಿಸಿದ್ದರು. ಗುರಿ ಕಟ್ಟಿ ಮೆರೆದ ವೀರರಿಗೆ ಪ್ರಶಸ್ತಿಗಳನ್ನೂ ನೀಡಲಾಯಿತು.

ಹಾಕಿ ಮತ್ತು ಕೊಡಗು

ಭಾರತದ ಹಾಕಿ ಕ್ರೀಡೆಯ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಒಲಿಂಪಿಕ್ಸ್ ಮತ್ತು ವಿಶ್ವ ಮಟ್ಟದಲ್ಲಿಯೂ ಸುವರ್ಣಕಾಲದ ಸಾಧನೆಗಳು ಗಮನ ಸೆಳೆಯುತ್ತವೆ. ಆ ಸಾಧನೆಗಳಲ್ಲಿ ಕನ್ನಡಿಗರ ಹೆಜ್ಜೆ ಗುರುತುಗಳೂ ಢಾಳಾಗಿ ಕಾಣಿಸುತ್ತವೆ. ಆ ಕನ್ನಡಿಗರಲ್ಲಿ ಕೊಡಗು ಜಿಲ್ಲೆಯ ಹಾಕಿಪಟುಗಳದ್ದೇ ಸಿಂಹಪಾಲು.

ಬಿ.ಪಿ. ಗೋವಿಂದ, ಎಸ್.ಬಿ. ಕಾಳಯ್ಯ, ಎಂ.ಪಿ. ಗಣೇಶ್, ಅರ್ಜುನ್ ಹಾಲಪ್ಪ, ನಿಕಿನ್ ತಿಮ್ಮಯ್ಯ, ಎ.ಬಿ. ಸುಬ್ಬಯ್ಯ, ಎಂ.ಎಂ. ಸೋಮಯ್ಯ, ಎಸ್.ವಿ. ಸುನೀಲ್, ನಿತೀನ್ ತಿಮ್ಮಯ್ಯ, ವಿ.ಆರ್. ರಘುನಾಥ್, ಲೇನ್ ಅಯ್ಯಪ್ಪ, ವಿ.ಎಸ್.ವಿನಯ್, ವಿಕ್ರಂ ಕಾಂತ್ ಅವರು ಇದರಲ್ಲಿ ಪ್ರಮುಖರು. ಐದು ದಶಕಗಳ ಹಿಂದೆ ವಿಶ್ವ ಚಾಂಪಿಯನ್ ಆಗಿದ್ದ ಭಾರತ ತಂಡದಲ್ಲಿ ಬಿ.ಪಿ. ಗೋವಿಂದ ಮತ್ತು ಕಾಳಯ್ಯ ಅವರು ಆಡಿದ್ದರು.

‘ಹಾಕಿ ಮಾತ್ರವಲ್ಲ; ಅಥ್ಲೆಟಿಕ್ಸ್ನಲ್ಲಿ ಅಶ್ವಿನಿ ನಾಚಪ್ಪ, ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಕ್ರಿಕೆಟ್ನಲ್ಲಿ ರಾಬಿನ್ ಉತ್ತಪ್ಪ ಹಾಗೂ ಟೆನಿಸ್ನಲ್ಲಿ ರೋಹನ್ ಬೋಪಣ್ಣ ಅವರಂತಹ ತಾರೆಗಳು ನಮ್ಮ ಕೊಡವರು ಎನ್ನುವುದು ಹೆಮ್ಮೆಯ ವಿಷಯ’ ಎಂದು ಸುಬ್ಬಯ್ಯ ಹೇಳುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ಆಟಗಾರರ ಸಂಖ್ಯೆ ಕಡಿಮೆಯಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ಅದರಲ್ಲೂ ಕೊಡವ ಯುವಕರು ಬೇರೆ ಬೇರೆ ರಾಜ್ಯ, ದೇಶಗಳಿಗೆ ಉದ್ಯೋಗ, ವಿದ್ಯಾಭ್ಯಾಸಗಳಿಗೆ ತೆರಳುತ್ತಿದ್ದಾರೆ. ಹಾಕಿ ಮತ್ತು ಸೇನೆಗೆ ಹೋಗುವವರು ಕಡಿಮೆಯಾಗುತ್ತಿದ್ದಾರೆ ಎನ್ನುವ ಮಾತು ಇದೆ.

ಕೆಲವು ವರ್ಷಗಳ ಹಿಂದೆ ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದ ನರೀಂದರ್ ಬಾತ್ರಾ ಅವರೇ ಈ ಮಾತು ಹೇಳಿದ್ದರು, ‘ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಕೊಡಗಿನ ಮೂರ್ನಾಲ್ಕು ಹಾಕಿಪಟುಗಳು ಇರುತ್ತಿದ್ದರು. ಈಗ ಆ ರೀತಿಯಾಗುತ್ತಿಲ್ಲ. ಮೊದಲಿನಂತೆ ಹಾಕಿ ಕ್ರೀಡಾಪಟುಗಳ ಹೆಚ್ಚಳಕ್ಕಾಗಿ ಕ್ರಮಕೈಗೊಳ್ಳಬೇಕು’ ಎಂದೂ ಬಾತ್ರಾ ಸಲಹೆ ನೀಡಿದ್ದರು.

ಕೊಡವ ಕುಟುಂಬಗಳನ್ನು ಒಂದು ಸೂರಿನಡಿ ಕರೆತರಲು ಈ ಹಾಕಿ ಉತ್ಸವವು ಮಾಧ್ಯಮವಾಗಿದೆ. ಈ ಉತ್ಸವದ ಮೂಲಕ ಜನಾಂಗದ ಹಿರಿಯರು, ಸಾಧಕರು ಮತ್ತು ಇಂದಿನ ಯುವ ಪೀಳಿಗೆಯ ಸಮ್ಮಿಲನದ ವೇದಿಕೆಯೂ ಈ ಕೂಟವಾಗಿದೆ.

‘ಬೆಂಗಳೂರಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಯುವಕರೇ ಈ ಬಾರಿ ಕೂಟದ ಸಂಘಟನೆಯ ಮುಂಚೂಣಿಯಲ್ಲಿದ್ದರು. ತಮ್ಮ ಪ್ರತಿಷ್ಠಿತ ಪರಂಪರೆಯನ್ನು ಉಳಿಸುವ ಆಸಕ್ತಿ ನವಪೀಳಿಗೆಯಲ್ಲಿಯೂ ಇದೆ. ಅವರೆಲ್ಲರೂ ತಮಗೆ ಗೊತ್ತಿರುವ ತಂತ್ರಜ್ಞಾನವನ್ನೂ ಇಲ್ಲಿ ಅಳವಡಿಸಿಕೊಂಡರು. ಅದರ ಫಲವಾಗಿ ವಿಡಿಯೊ ರೆಫರಲ್ ವ್ಯವಸ್ಥೆ ಮಾಡಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಪ್ರತಿಯೊಂದು ಹಂತದಲ್ಲಿಯೂ ಈ ಕಾಲದ ಹುಡುಗರೇ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು. ಅವರೆಲ್ಲರ ಸಹಕಾರದಿಂದ ಶೂನ್ಯ ಕಸ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತಕೂಟವನ್ನು ಆಯೋಜಿಸಲಾಯಿತು. ಪರಿಸರಪ್ರೀತಿ ಮೆಚ್ಚುವಂತದ್ದು. ತಮ್ಮ ಸೃಜನಾತ್ಮಕತೆಯಿಂದ ಉತ್ಸವವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿದರು. ವರ್ಲ್ಡ್ವೈಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಯಾಗಲು ಬೇಕಾದ ತಾಂತ್ರಿಕ ಮಾನದಂಡಗಳನ್ನು ಪೂರೈಸಲೂ ಯುವ ಸ್ನೇಹಿತರೇ ಕಾರಣರಾದರು. ಆದ್ದರಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಉತ್ತಮ ಭವಿಷ್ಯ ಇದೆ ಎಂಬ ಭರವಸೆ ಮೂಡಿದೆ’ ಎಂದು ಸುಬ್ಬಯ್ಯ ಹೆಮ್ಮೆಯಿಂದ ಹೇಳಿದರು.

ಈ ಬಾರಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸುವ ಕೊಡವ ಕುಟುಂಬಗಳು ಮುಂದಿನ ವರ್ಷದ ಕೂಟಕ್ಕಾಗಿ ಸಿದ್ಧತೆ ಆರಂಭಿಸಿವೆ. ಮುಂದಿನ ಬಾರಿ ಚೆನಂಡ ಕುಟುಂಬವು ಸಂಘಟಿಸಲಿದೆ. ಮತ್ತಷ್ಟು ಹೊಸತನಗಳ ನಿರೀಕ್ಷೆಯೊಂದಿಗೆ ಕೊಡಗು ಸಿದ್ಧವಾಗುತ್ತಿದೆ.

ಮಹಿಳೆಯರಿಗೆ 5 ಎ ಸೈಡ್..

ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಮಹಿಳೆಯರಿಗಾಗಿ 5 ಎ ಸೈಡ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ‘ಇಷ್ಟು ವರ್ಷಗಳವರೆಗೆ ಆಸಕ್ತಿ ಇರುವ ಮಹಿಳೆಯರು ಪುರುಷರ ತಂಡಗಳಲ್ಲಿಯೇ ಆಡುತ್ತಿದ್ದರು. ಆದರೆ ಮಹಿಳೆಯರಿಗೆ ಪೂರ್ಣ ಅವಕಾಶ ಇರಲಿಲ್ಲ. ಆದ್ದರಿಂದ ಹಾಕಿ ಹಾಸ್ಟೆಲ್, ಶಿಬಿರಗಳಲ್ಲಿ ತರಬೇತಿ ಪಡೆದ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಆದರೆ ಅದರಾಚೆಯೂ ಹಲವಾರು ಮಹಿಳೆಯರು ಆಡುವ ಆಸಕ್ತಿ ಹೊಂದಿದ್ದರು. ಅವರಿಗೂ ವೇದಿಕೆ ಸೃಷ್ಟಿಸಲು ಈ ಸಲ 5 ಎ ಸೈಡ್ ಟೂರ್ನಿ ಆಯೋಜಿಸಲಾಯಿತು. 58 ತಂಡಗಳು ಭಾಗವಹಿಸಿದ್ದವು. ಗೆದ್ದವರಿಗೆ ಪ್ರಶಸ್ತಿ, ಸೋತವರಿಗೂ ಕಾಣಿಕೆಗಳನ್ನು ನೀಡಲಾಯಿತು’ ಎಂದು ಸಂಘಟಕರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯು ದೇಶದ ಮಹಿಳಾ ಹಾಕಿ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದೆ.

ಪುಷ್ಪ ಪೂವಯ್ಯ, ಜಮುನಾ, ಮಿಲನಾ, ಪೊನ್ನಮ್ಮ ಮತ್ತು ಸೌಮ್ಯಾ ಅವರು ಕೊಡಗಿನ ಪ್ರಮುಖ ಆಟಗಾರ್ತಿಯರಾಗಿದ್ದು, ಅವರು ಭಾರತ ತಂಡಕ್ಕಾಗಿ ಆಡಿದ್ದಾರೆ. ರೋಹಿಣಿ ಮತ್ತು ಪುಚಿಮಂಡ ಅನುಪಮಾ ಅವರು ಅಂತರರಾಷ್ಟ್ರೀಯ ಅಂಪೈರ್ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಆಯ್ಕೆ ಶಿಬಿರದಲ್ಲಿ ಇದುವರೆಗೆ 17 ಮಹಿಳೆಯರು ಭಾಗವಹಿಸಿದ್ದಾರೆ.

ವಿಜೇತ ತಂಡಕ್ಕೆ ₹2 ಲಕ್ಷ, ರನ್ನರ್ಸ್ ಅಪ್ ತಂಡಕ್ಕೆ ₹ 1 ಲಕ್ಷ ಹಾಗೂ ಬೆಳ್ಳಿ ಟ್ರೋಫಿಗಳನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.