ಆಕ್ಲೆಂಡ್: ಏಕದಿನ ವಿಶ್ವಕಪ್ನ ನ್ಯೂಜಿಲೆಂಡ್ನ ಮಹಿಳಾ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಮಾಜಿ ಆಟಗಾರ ಕ್ರೆಗ್ ಮೆಕ್ಮಿಲನ್ ಅವರನ್ನು ಆಯ್ಕೆ ಮಾಡಲಾಗಿದೆ. 2025ರ ಮಹಿಳಾ ಏಕದಿನ ವಿಶ್ವಕಪ್ಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯ ವಹಿಸಿದ್ದು, ಸೆ.30 ರಿಂದ ಪಂದ್ಯಗಳು ಆರಂಭವಾಗಲಿವೆ.

48 ವರ್ಷದ ನ್ಯೂಜಿಲೆಂಡ್ನ ಮಾಜಿ ಆಟಗಾರ ಕ್ರೆಗ್ ಮೆಕ್ಮಿಲನ್ 55 ಟೆಸ್ಟ್ ಪಂದ್ಯಗಳು ಹಾಗೂ 197 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ಬ್ಯಾಟ್ನಿಂದ 7,500 ರನ್ಗಳನ್ನು ಗಳಿಸಿದ್ದಾರೆ. ಇವರು 2024ರ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಮಹಿಳಾ ತಂಡದ ಭಾಗವಾಗಿದ್ದರು. ಈಗ ಏಕದಿನ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ತಂಡವನ್ನು ಮುನ್ನೇಡೆಸಲಿದ್ದಾರೆ.

‘ನ್ಯೂಜಿಲೆಂಡ್ನ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡಲು ಸಂತೋಷವಾಗುತ್ತದೆ. ಪ್ರತಿಭಾನ್ವಿತ ಆಟಗಾರ್ತಿಯರೊಂದಿಗೆ ಕೆಲಸ ಮಾಡುವುದು ಹಾಗೂ ಅವರು ತಮ್ಮ ಗುರಿಯನ್ನು ತಲುಪಲು ಸಹಕರಿಸುತ್ತೇನೆ. ನಮ್ಮ ತಂಡವು ಬಲಿಷ್ಠವಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದಿದೆ. ಏಕದಿನ ವಿಶ್ವಕಪ್ ಅನ್ನು ತನ್ನ ಕ್ಯಾಬಿನ್ನಲ್ಲಿರಿಸುವ ಗುರಿಯನ್ನು ಹೊಂದಿದೆ. ನಮ್ಮ ತಂಡವು ಭಾರತದಿಂದ ಮತ್ತೊಂದು ವಿಶ್ವಕಪ್ ಅನ್ನು ತನ್ನದಾಗಿಸಿಕೊಳ್ಳಲು ಉತ್ಸಾಹದಿಂದ ಇದೆ ಎಂದು ಮೆಕ್ಮಿಲನ್ ಹೇಳಿದ್ದಾರೆ.

ಕಳೆದ ವರ್ಷ ತಂಡದ ಭಾಗವಾಗಿದ್ದೆ. ತಂಡದಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ಇಷ್ಟ ಪಡುತ್ತೇನೆ. ನಮ್ಮ ತಂಡವು ವಿಶ್ವ ವೇದಿಕೆಯಲ್ಲಿ ಸವಾಲು ಹಾಕುವ ತಂಡವಾಗಿದೆ ಎಂದು ಅವರು ಹೇಳಿದ್ದಾರೆ.

ಅ.1ರಂದು ಇಂದೋರ್ನಲ್ಲಿ ಆಸ್ಟ್ರೇಲಿಯಾ ತಂಡದ ಎದುರು ನ್ಯೂಜಿಲೆಂಡ್ ಸೇಣೆಸಲಿದೆ. ತಂಡದ ಹಲವು ಆಟಗಾರ್ತಿಯರು ಕಳೆದ ಕೆಲವು ತಿಂಗಳುಗಳ ಹಿಂದೆ ಸ್ಪಿನ್ ಪಿಚ್ನ ಆಳ ಅಗಲವನ್ನು ಅರಿಯಲು ಭಾರತಕ್ಕೆ ಬಂದಿದ್ದರು. ನ್ಯೂಜಿಲ್ಯಾಂಡ್ ತಂಡವು 2000 ದಲ್ಲಿ ಏಕದಿನ ವಿಶ್ವ ಕಪ್ ಅನ್ನು ತನ್ನದಾಗಿಸಿಕೊಂಡಿತ್ತು. ಆದಾದ ಬಳಿಕ ಮೂರು ಬಾರಿ ರನ್ನರ್ ಆಪ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.