ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಹಿರಿಮೆ ಕರ್ನಾಟಕದ ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ಅವರದ್ದು. ಇವರ ನಂತರ ಭಾರತದ ಯಾರೊಬ್ಬರೂ ಈ ಟ್ರೋಫಿಗೆ ಮುತ್ತಿಕ್ಕಿಲ್ಲ. ದಶಕದಿಂದ ಕಾಡುತ್ತಿರುವ ಈ ಕೊರಗನ್ನು ಸೈನಾ ಮತ್ತು ಸಿಂಧು, ದೂರ ಮಾಡುವರೇ ಎಂಬ ಪಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು

ಭಾರತದಲ್ಲಿ ಮಹಿಳಾ ಬ್ಯಾಡ್ಮಿಂಟನ್‌ಗೆ ಹೊಸ ಮೆರುಗು ನೀಡಿದ ತಾರೆಯರು ಇವರು. ಈ ಕ್ರೀಡೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ಹಿರಿಮೆಯೂ ಈ ಜೋಡಿಗೆ ಸಲ್ಲುತ್ತದೆ.

ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ಕೂಟ, ಏಷ್ಯನ್ ಮತ್ತು ಕಾಮನ್‌ವೆಲ್ತ್ ಕೂಟಗಳಲ್ಲಿ ಪದಕಗಳನ್ನು ಗೆದ್ದಿರುವ ಇವರು ಹೊಸ ತಲೆಮಾರಿನ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ, ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ಸ್ಥಾನ ಪಡೆದಿರುವ ಈ ಜೋಡಿಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ಇನ್ನೂ ಕೈಗೆಟುಕದಾಗಿದೆ.

ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಅವಕಾಶ ಸೈನಾಗೆ ಲಭಿಸಿತ್ತು. ಭಾರತದ ಆಟಗಾರ್ತಿ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೋಲಿನ್ ಮರಿನ್ ಎದುರು ಸೋತು ಬೆಳ್ಳಿಯ ಪದಕಕ್ಕೆ ತೃಪ್ತಿ ಪಟ್ಟಿದ್ದರು. ಹೋದ ವರ್ಷ ಸೆಮಿಫೈನಲ್ ಪ್ರವೇಶಿಸಿದ್ದು ಸಿಂಧು ಅವರ ಶ್ರೇಷ್ಠ ಸಾಧನೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ 108ನೇ ಆವೃತ್ತಿ ಮಾರ್ಚ್ 6ರಿಂದ 10ರವರೆಗೆ ನಡೆಯಲಿದೆ. ಹೀಗಾಗಿ ಈ ಬಾರಿಯೂ ಸಿಂಧು ಮತ್ತು ಸೈನಾ ಮೇಲೆ ಬ್ಯಾಡ್ಮಿಂಟನ್ ಪ್ರಿಯರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಜೋಡಿ ವಿಶ್ವ ಶ್ರೇಷ್ಠರ ಸವಾಲು ಮೀರಿ, ಅಭಿಮಾನಿಗಳ ಕನಸನ್ನು ಸಾಕಾರಗೊಳಿಸಲಿದೆಯೇ ಎಂಬ ಕುತೂಹಲ ಗರಿಗೆದರಿದೆ.

ಈ ಸಲದ ಚಾಂಪಿಯನ್‌ಷಿಪ್

ಮಾರ್ಚ್ 6–10 (ಬುಧವಾರದಿಂದ ಭಾನುವಾರ)

ಚಾಂಪಿಯನ್‌ಷಿಪ್ ನಡೆದ ಸ್ಥಳಗಳು

ವರ್ಷ; ಸ್ಥಳ

1899–1901;ಬಕಿಂಗ್‌ಹ್ಯಾಮ್ ಗೇಟ್

1902;ಸಿಡೆನ್‌ಹ್ಯಾಮ್ ಹಿಲ್

1903–1909;ಬನ್‌ಹಿಲ್ ರೋ, ಇಸ್ಲಿಂಗ್‌ಟನ್

1910–1939;ವೆಸ್ಟ್ ಮಿನಿಸ್ಟರ್, ಲಂಡನ್

1947–1949;ಹ್ಯಾರಿಂಗೆ ಅರೇನಾ, ನಾರ್ತ್ ಲಂಡನ್

1950–1956;ಎಂಪ್ರೆಸ್ ಹಾಲ್, ಅರ್ಲಸ್ ಕೋರ್ಟ್

1957–1993;ವೆಂಬ್ಲೆ ಅರೇನಾ, ಲಂಡನ್

1994 ರಿಂದ;ಅರೆನಾ ಬರ್ಮಿಂಗ್‌ಹ್ಯಾಮ್; ಬರ್ಮಿಂಗ್‌ಹ್ಯಾಮ್

ಚಿನ್ನ ಗೆದ್ದ ಭಾರತೀಯರು

ಪ್ರಕಾಶ್ ಪಡುಕೋಣೆ

ವರ್ಷ: 1980

ಎದುರಾಳಿ: ಲೀಮ್ ಸ್ವೀ ಕಿಂಗ್ (ಇಂಡೊನೇಷ್ಯಾ)

ಸ್ಕೋರ್: 15–3, 15–10

ಪುಲ್ಲೇಲಾ ಗೋಪಿಚಂದ್

ವರ್ಷ: 2001

ಎದುರಾಳಿ: ಚೆನ್ ಹಾಂಗ್ (ಚೀನಾ).

ಸ್ಕೋರ್: 15–12, 15–6.

ಯಶಸ್ವಿ ಕ್ರೀಡಾಪಟುಗಳು

ಜಾರ್ಜ್ ಅಲನ್ ಥಾಮಸ್

ದೇಶ: ಇಂಗ್ಲೆಂಡ್

ಒಟ್ಟು ಪ್ರಶಸ್ತಿ: 21

ಪುರುಷರ ಸಿಂಗಲ್ಸ್: 4

ಡಬಲ್ಸ್: 9

ಮಿಶ್ರ ಡಬಲ್ಸ್: 8

ಫ್ರಾಂಕ್ ಡೆವ್ಲಿನ್

ದೇಶ: ಐರ್ಲೆಂಡ್

ಒಟ್ಟು ಪ್ರಶಸ್ತಿ: 18

ಸಿಂಗಲ್ಸ್: 6

ಡಬಲ್ಸ್: 7

ಮಿಶ್ರ ಡಬಲ್ಸ್: 5

ಜೂಡಿ ಡೆವ್ಲಿನ್

ದೇಶ: ಅಮೆರಿಕ

ಒಟ್ಟು ಪ್ರಶಸ್ತಿ: 17

ಮಹಿಳಾ ಸಿಂಗಲ್ಸ್: 10

ಡಬಲ್ಸ್: 7

ಮೆರಿಲ್ ಲುಕಾಸ್

ದೇಶ: ಇಂಗ್ಲೆಂಡ್

ಒಟ್ಟು ಪ್ರಶಸ್ತಿ: 17

ಮಹಿಳಾ ಸಿಂಗಲ್ಸ್: 6

ಡಬಲ್ಸ್: 10

ಮಿಶ್ರ ಡಬಲ್ಸ್: 1

ಒಟ್ಟು ಬಹುಮಾನ ಮೊತ್ತ

₹ 7.09 ಕೋಟಿ

ಈ ಬಾರಿಯ ಕಣದಲ್ಲಿರುವವರು

ಒಟ್ಟು: 368

ಪುರುಷರ ಸಿಂಗಲ್ಸ್: 48 (17 ದೇಶ)

ಮಹಿಳಾ ಸಿಂಗಲ್ಸ್: 48 (22 ದೇಶ)

ಪುರುಷರ ಡಬಲ್ಸ್: 92 (16 ದೇಶ)

ಮಹಿಳಾ ಡಬಲ್ಸ್: 82 (19 ದೇಶ)

ಮಿಶ್ರ ಡಬಲ್ಸ್: 98 (19 ದೇಶ)

ಭಾರತದ ಸ್ಪರ್ಧಿಗಳು

ಪುರುಷರ ಸಿಂಗಲ್ಸ್: ಕಿದಂಬಿ ಶ್ರೀಕಾಂತ್, ಸಮೀರ್ ವರ್ಮಾ, ಎಚ್.ಎಸ್.ಪ್ರಣಯ್, ಬಿ.ಸಾಯಿ ಪ್ರಣೀತ್ ಮತ್ತು ಶುಭಂಕರ್ ಡೇ.

ಮಹಿಳಾ ಸಿಂಗಲ್ಸ್: ಪಿ.ವಿ.ಸಿಂಧು, ಸೈನಾ ನೆಹ್ವಾಲ್.

ಪುರುಷರ ಡಬಲ್ಸ್: ಮನು ಅತ್ರಿ–ಬಿ.ಸುಮೀತ್ ರೆಡ್ಡಿ, ರಾಜು ಮೊಹಮ್ಮದ್ ರೆಹಾನ್–ವೆಲಾವನ್ ವಾಸುದೇವನ್, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ.

ಮಹಿಳಾ ಡಬಲ್ಸ್: ಎನ್.ಸಿಕ್ಕಿ ರೆಡ್ಡಿ–ಅಶ್ವಿನಿ ಪೊನ್ನಪ್ಪ, ಜಕ್ಕಂಪುಡಿ ಮೇಘನಾ–ಎಸ್.ಪೂರ್ವಿಶಾ ರಾಮ್, ಜೆ.ಅನೀಶಾ ಕೋವಸರ್–ಅಕ್ಷಯ ಸರಬೋಜಿ.

ಮಿಶ್ರ ಡಬಲ್ಸ್: ಎನ್.ಸಿಕ್ಕಿ ರೆಡ್ಡಿ–ಪ್ರಣವ್ ಜೆರಿ ಚೋಪ್ರಾ, ವೆಂಕಟ್ ಗೌರವ್ ಪ್ರಸಾದ್–ಜೂಹಿ ದೇವಾಂಗನ್, ರಾಜು ಮೊಹಮ್ಮದ್ ರೆಹಾನ್–ಜೆ.ಅನೀಶಾ ಕೋವಸರ್, ಅಶ್ವಿನಿ ಪೊನ್ನಪ್ಪ–ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ.

ನಿಮಗಿದು ಗೊತ್ತೆ?

ಗಿಲ್ಡ್‌ಫೋರ್ಡ್ ಬ್ಯಾಡ್ಮಿಂಟನ್ ಕ್ಲಬ್‌ನ ಕಾರ್ಯದರ್ಶಿ ಪರ್ಸಿ ಬಕ್ಲಿ ಅವರು 1898ರ ಮಾರ್ಚ್ 10 ರಂದು ಗಿಲ್ಡ್‌ಫೋರ್ಡ್ ಡ್ರಿಲ್ ಹಾಲ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಓಪನ್ ಬ್ಯಾಡ್ಮಿಂಟನ್ ಡಬಲ್ಸ್ ಟೂರ್ನಿ ಆಯೋಜಿಸಿದ್ದರು.

ಈ ಟೂರ್ನಿಯ ಯಶಸ್ಸು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಆರಂಭಕ್ಕೆ ಮುನ್ನುಡಿಯಾಯಿತು. ಬಕಿಂಗ್‌ಹ್ಯಾಮ್ ಗೇಟ್‌ನ ದಿ ಹೆಡ್‌ಕ್ವಾಟ್ರಸ್ ಆಫ್ ದಿ ಲಂಡನ್ ಸ್ಕಾಟಿಷ್ ರೆಜಿಮೆಂಟ್ ಡ್ರಿಲ್ ಹಾಲ್‌ನಲ್ಲಿ 1900ರಲ್ಲಿ ಚೊಚ್ಚಲ ಚಾಂಪಿಯನ್‌ಷಿಪ್ ಆಯೋಜನೆಯಾಗಿತ್ತು. ಅದೇ ವರ್ಷ ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳನ್ನು ಪರಿಚಯಿಸಲಾಯಿತು.

ಚೊಚ್ಚಲ ಸಿಂಗಲ್ಸ್ ಟ್ರೋಫಿ ಜಯಿಸಿದ ಹಿರಿಮೆಗೆ ಸಿಡ್ನಿ ಎಚ್.ಸ್ಮಿತ್ ಪಾತ್ರರಾದರು. ಎಥೆಲ್ ಬಿ ಥಾಂಪ್ಸನ್ ಮಹಿಳಾ ಸಿಂಗಲ್ಸ್ ವಿಭಾಗದ ಕಿರೀಟ ಮುಡಿಗೇರಿಸಿಕೊಂಡಿದ್ದರು.

1903ರಿಂದ 1909ರ ವರೆಗೆ ಲಂಡನ್ ರೈಫಲ್ ಬ್ರಿಗೇಡ್ಸ್ ಸಿಟಿ ಹೆಡ್‌ಕ್ವಾಟ್ರಸ್, ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿತ್ತು. 1938ರಲ್ಲಿ ಮೊದಲ ಸಲ ರೇಡಿಯೊದಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ನೀಡಲಾಗಿತ್ತು. ಎರಡನೇ ಮಹಾಯುದ್ಧದ ನಂತರದ ಮೊದಲ ಚಾಂಪಿಯನ್‌ಷಿಪ್ (1947) ಹ್ಯಾರಿಂಗೆ ಅರೇನಾದಲ್ಲಿ ಆಯೋಜನೆಯಾಗಿತ್ತು.

1951ರಲ್ಲಿ ಪಂದ್ಯಗಳು ಟಿ.ವಿ.ಯಲ್ಲಿ ಬಿತ್ತರಗೊಂಡಿದ್ದವು. 1977ರಲ್ಲಿ ಚಾಂಪಿಯನ್‌ಷಿಪ್‌ಗೆ ಮೊದಲ ಪ್ರಾಯೋಜಕತ್ವ ಸಿಕ್ಕಿತ್ತು. ‘ಜಾನ್ ಪ್ಲೇಯರ್ ಬ್ಯಾಡ್ಮಿಂಟನ್’ ಪ್ರಾಯೋಜಕತ್ವದ ಹಕ್ಕು ಪಡೆದಿತ್ತು.

1980ರಲ್ಲಿ ಚೀನಾದ ಸ್ಪರ್ಧಿಗಳು ಮೊದಲ ಸಲ ಆಲ್ ಇಂಗ್ಲೆಂಡ್‌ನಲ್ಲಿ ಕಣಕ್ಕಿಳಿದಿದ್ದರು. 1984ರಲ್ಲಿ ‘ಯುನೆಕ್ಸ್’ ಸಂಸ್ಥೆಯು ಟೈಟಲ್ ಪ್ರಾಯೋಜಕತ್ವ ಪಡೆದಿತ್ತು.

1994ರಲ್ಲಿ ಬರ್ಮಿಂಗ್‌ಹ್ಯಾಮ್‌ನ ನ್ಯಾಷನಲ್ ಇಂಡೋರ್ ಅರೇನಾಕ್ಕೆ ಚಾಂಪಿಯನ್‌ಷಿಪ್ ಸ್ಥಳಾಂತಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಅದೇ ಅಂಗಳದಲ್ಲಿ ಪಂದ್ಯಗಳು ನಡೆಯುತ್ತಿವೆ. 2005ರಲ್ಲಿ ಆತಿಥೇಯ ಇಂಗ್ಲೆಂಡ್‌ನ ಸ್ಪರ್ಧಿಗಳು ಕೊನೆಲ ಸಲ ಚಾಂಪಿಯನ್ ಆಗಿದ್ದರು. 2007ರಲ್ಲಿ ಆಲ್ ಇಂಗ್ಲೆಂಡ್ ಓಪನ್, ಬಿಡಬ್ಲ್ಯುಎಫ್ ಸೂಪರ್ ಸಿರೀಸ್‌ನ ಅವಿಭಾಜ್ಯ ಅಂಗವಾಯಿತು.

ಅತಿ ಕಿರಿಯ ಚಾಂಪಿಯನ್

ಇಂಡೊನೇಷ್ಯಾದ ರೂಡಿ ಹರ್ಟಾನೊ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. 1968ರಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಆಗ ಅವರ ವಯಸ್ಸು 18 ವರ್ಷ 7 ತಿಂಗಳು. ಅವರು ಚಾಂಪಿಯನ್‌ಷಿಪ್‌ನಲ್ಲಿ ಮುಡಿಗೇರಿಸಿಕೊಂಡ ಚೊಚ್ಚಲ ಟ್ರೋಫಿಯೂ ಅದಾಗಿತ್ತು. ಬಳಿಕ ಅವರು ಸತತ ಏಳು ಪ್ರಶಸ್ತಿ ಜಯಿಸಿದ ದಾಖಲೆಯನ್ನೂ ನಿರ್ಮಿಸಿದ್ದರು.

ಟೂರ್ನಿಯಲ್ಲಿ ಟ್ರೋಫಿ ಜಯಿಸಿದ ಜಪಾನ್‌ನ ಮೊದಲ ಆಟಗಾರ್ತಿ ಎಂಬ ಶ್ರೇಯ ಹಿರೋಯಿ ಯೂಕಿ ಅವರದ್ದು. 1969ರಲ್ಲಿ ಈ ಸಾಧನೆ ಮಾಡಿದ್ದರು.

ಚೀನಾದ ಗಾವೊ ಲಿಂಗ್ ಮತ್ತು ಹುವಾಂಗ್ ಶೂಯಿ ಅವರು ಚಾಂಪಿಯನ್‌ಷಿಪ್‌ನ ಮಹಿಳಾ ಡಬಲ್ಸ್‌ನಲ್ಲಿ ‘ಹ್ಯಾಟ್ರಿಕ್ ಡಬಲ್’ (ಸತತ ಆರು ಪ್ರಶಸ್ತಿ) ಸಾಧನೆ ಮಾಡಿದ್ದಾರೆ.

2009ರಲ್ಲಿ ಚೀನಾದ ಸ್ಪರ್ಧಿಗಳೇ ಪ್ರಾಬಲ್ಯ ಮೆರೆದಿದ್ದರು. ಚಾಂಪಿಯನ್‌ಷಿಪ್‌ನ ಐದೂ ಪ್ರಶಸ್ತಿಗಳನ್ನು (ಪುರುಷರ ಮತ್ತು ಮಹಿಳಾ ಸಿಂಗಲ್ಸ್, ಪುರುಷರ ಮತ್ತು ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್) ಆ ದೇಶದವರೇ ಗೆದ್ದುಕೊಂಡಿದ್ದರು.

‘ಶತಕ’ದ ಸಾಧನೆ

2010ರಲ್ಲಿ ಆಲ್ ಇಂಗ್ಲೆಂಡ್ ‘ಶತಕ’ದ ಸಾಧನೆ ಮಾಡಿತ್ತು. ಮಾರ್ಚ್ 9ರಿಂದ 14ರವರೆಗೆ ನೂರನೇ ಚಾಂಪಿಯನ್‌ಷಿಪ್ ನಡೆದಿತ್ತು. ಅದೇ ವರ್ಷ ಮಲೇಷ್ಯಾದ ಲೀ ಚೊಂಗ್ ವೀ ಚೊಚ್ಚಲ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ಟಿನೆ ರಾಸ್ಮಸೆನ್ ಚಾಂಪಿಯನ್ ಆಗಿದ್ದರು.

ಈ ಬಾರಿ 108ನೇ ಆವೃತ್ತಿಯ ಪಂದ್ಯಗಳು ನಡೆಯುತ್ತಿವೆ.

* ಸೈನಾ ಮತ್ತು ಸಿಂಧು, ವಿಶ್ವದ ಶ್ರೇಷ್ಠ ಆಟಗಾರ್ತಿಯರು. ಈ ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಲು ಇವರಿಗೆ ಉತ್ತಮ ಅವಕಾಶ ಇದೆ. ಪರಿಣಾಮಕಾರಿ ಸಾಮರ್ಥ್ಯ ತೋರಿದರೆ ದಶಕದ ಕೊರಗು ದೂರವಾಗುವುದು ನಿಶ್ಚಿತ .
-ವಿಮಲ್ ಕುಮಾರ್, ಹಿರಿಯ ಆಟಗಾರ ಮತ್ತು ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.