ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಫ್ ಮ್ಯಾರಥಾನ್‌: ಇಥಿಯೋಪಿಯಾದ ಗಿಡಿಗೆ ವಿಶ್ವದಾಖಲೆ

5000 ಮೀಟರ್ಸ್, 10 ಸಾವಿರ ಮೀಟರ್ಸ್ ಓಟದಲ್ಲೂ ಸಾಧನೆ ಮಾಡಿದ್ದ ಅಥ್ಲೀಟ್‌
Last Updated 24 ಅಕ್ಟೋಬರ್ 2021, 15:13 IST
ಅಕ್ಷರ ಗಾತ್ರ

ಮ್ಯಾಡ್ರಿಡ್: ಮೊದಲ ಬಾರಿ ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಇಥಿಯೋಪಿಯಾದ ಲೆಟೆಸೆನ್‌ಬೆಟ್‌ ಗಿಡಿ ಮಹಿಳಾ ವಿಭಾಗದ ವಿಶ್ವದಾಖಲೆ ಮುರಿದು ಚಾಂಪಿಯನ್‌ ಆದರು.

ಭಾನುವಾರ ಶುಭ್ರ ಬೆಳಕಿನಲ್ಲಿ ನಡೆದ ವೆಲೆನ್ಸಿಯಾ ಚಾಂಪಿಯನ್‌ಷಿಪ್‌ನಲ್ಲಿ ಒಂದು ತಾಸು ಎರಡು ನಿಮಿಷ 52 ಸೆಕೆಂಡುಗಳಲ್ಲಿ 23 ವರ್ಷದ ಗಿಡಿ ಗುರಿ ಮುಟ್ಟಿದರು. ಈ ಮೂಲಕ ಒಂದು ನಿಮಿಷದ ಅಂತರದಲ್ಲಿ ಹಿಂದಿನ ದಾಖಲೆ ಮುರಿದರು.

ಕೆನ್ಯಾದ ರೂಥ್ ಚೆಪನ್‌ಗೆಟಿಚ್‌ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆ ಬರೆದಿದ್ದರು. 5000 ಮೀಟರ್ಸ್ ಮತ್ತು10,000 ಮೀಟರ್ಸ್ ಒಟದಲ್ಲೂ ಅವರು ವಿಶ್ವ ದಾಖಲೆ ಬರೆದಿದ್ದಾರೆ. 2020ರಲ್ಲಿ ವೆಲೆನ್ಸಿಯಾದಲ್ಲೇ ಅವರು5000 ಮೀಟರ್ಸ್ ದಾಖಲೆ ಮಾಡಿದ್ದರು.

ಮೊದಲ 10 ಕಿಲೋಮೀಟರ್ಸ್ ದೂರವನ್ನು 29 ನಿಮಿಷ 45 ಸೆಕೆಂಡುಗಳಲ್ಲಿ ಕ್ರಮಿಸಿದ ಅವರು ನಂತರ ಇನ್ನಷ್ಟು ವೇಗ ಪಡೆದುಕೊಂಡು ಗುರಿಯತ್ತ ಮುನ್ನುಗ್ಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT