ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ಹಿತಶ್ರೀ ಎನ್. ಹಾಗೂ ವೈಷ್ಣವಿ ಜಿ. ಅವರು ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಷಿಪ್ನ 17 ವರ್ಷದೊಳಗಿನ ಬಾಲಕಿಯರ 100 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚು ಗೆದ್ದರು.

ಮೂರನೇ ದಿನವಾದ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಹಿತಶ್ರೀ ಅವರು 1ನಿ. 07.78 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಬಸವನಗುಡಿ ಈಜು ಕೇಂದ್ರದ (ಬಿಎಸಿ) ಜನ್ಯಾ ಬಿ.ಎಸ್. (1ನಿ. 10.10ಸೆ.) ಬೆಳ್ಳಿ ಗೆದ್ದರೆ, ವೈಷ್ಣವಿ ಅವರು ಸ್ಪರ್ಧೆ ಮುಗಿಸಲು 1ನಿ., 11.31 ಸೆಕೆಂಡುಗಳನ್ನು ತೆಗೆದುಕೊಂಡರು.

ಹಿತಶ್ರೀ (2ನಿ.16.82ಸೆ.) ಹಾಗೂ ವೈಷ್ಣವಿ (2ನಿ.17.97ಸೆ.) ಅವರು 17 ವರ್ಷದೊಳಗಿನ ಬಾಲಕಿಯರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಡಾಲ್ಫಿನ್ ಅಕ್ವಾಟಿಕ್ಸ್ನ ಮಿಹಿಕಾ ದತ್ತ (2ನಿ.10.35ಸೆ.) ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಎನ್ಎಸಿ ಈಜುಪಟುಗಳು 12 ವರ್ಷದೊಳಗಿನ ಬಾಲಕಿಯರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿಯೂ ಪಾರಮ್ಯ ಮೆರೆದರು. ವಿದುಲಾ ಆರ್. (2ನಿ.20.02ಸೆ.) ಸ್ವರ್ಣ ಗೆದ್ದರೆ, ಉನ್ನತಿ ಎ.ರಾವ್ (2ನಿ.23.46ಸೆ.) ಹಾಗೂ ನಯನಾ ಎ.ಎಂ. (2ನಿ.23.99ಸೆ.) ಕಂಚು ತಮ್ಮದಾಗಿಸಿಕೊಂಡರು.

14 ವರ್ಷದೊಳಗಿನ ಬಾಲಕರ 25 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬಿಎಸಿ ಈಜುಪಟುಗಳು ಎಲ್ಲ ಮೂರು ಪ್ರಶಸ್ತಿ ಗೆದ್ದುಕೊಂಡರು. ಲಕ್ಷ್ಯ ಜಿ. 12.10ಸೆ.ಗಳಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಕೊರಳೊಡ್ಡಿದರು. ಎಸ್. ಕ್ರಿಷ್ (12.20ಸೆ.) ರಜತ ಗೆದ್ದರೆ, 12.56ಸೆ.ಗಳಲ್ಲಿ ಗುರಿ ಮುಟ್ಟಿದ ಸಾಯಿ ರಂಜನ್ ಮಧುಕರ್ ಹಾಗೂ ನಿಖಿಲ್ ತೇಜ್ ರೆಡ್ಡಿ ಅವರು ಕಂಚು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.