ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ದಕ್ಷಿಣ ಆಫ್ರಿಕಾ ಮಣಿಸಿದ ಭಾರತ

Published 27 ಜನವರಿ 2024, 15:56 IST
Last Updated 27 ಜನವರಿ 2024, 15:56 IST
ಅಕ್ಷರ ಗಾತ್ರ

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರಿಸಿದ ಭಾರತ ಪುರುಷರ ಹಾಕಿ ತಂಡವು ಆತಿಥೇಯರ ವಿರುದ್ಧ 3-0 ಅಂತರದ ಸುಲಭ ಗೆಲುವು ದಾಖಲಿಸಿತು.

ನಾಯಕ ಹರ್ಮನ್ ಪ್ರೀತ್ ಸಿಂಗ್ (2ನೇ ನಿಮಿಷ), ಅಭಿಷೇಕ್ (13ನೇ ನಿಮಿಷ) ಮತ್ತು ಸುಮಿತ್ (30ನೇ ನಿಮಿಷ) ಗೋಲು ಗಳಿಸಿದರು.

ಆಕ್ರಮಣಕಾರಿ ಆಟ ಪ್ರಾರಂಭಿಸಿದ ಭಾರತ ಆಟಗಾರರು, ಆರಂಭಿಕ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್ ಪ್ರೀತ್ ಪ್ರಬಲ ಡ್ರ್ಯಾಗ್ ಫ್ಲಿಕ್ ಮೂಲಕ ಪರಿವರ್ತಿಸಿ ಮುನ್ನಡೆ ಸಾಧಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ ಒಂದೆರಡು ನಿಮಿಷಗಳು ಬಾಕಿ ಇರುವಾಗ ಅಭಿಷೇಕ್ ಆಕ್ರಮಣಕಾರಿ ಶೈಲಿಯ ಆಟದಲ್ಲಿ ಯಶಸ್ವಿಯಾದರು. 

ಎರಡನೇ ಕ್ವಾರ್ಟರ್‌ನಲ್ಲಿ ಎದುರಾಳಿ ತಂಡದ ಉತ್ತಮ ದಾಳಿಗಳ ಹೊರತಾಗಿಯೂ, ಭಾರತದ ರಕ್ಷಣೆ ಕೋಟೆಯನ್ನು ದಾಟಲು ಸಾಧ್ಯವಾಗಲಿಲ್ಲ. 

ಪಂದ್ಯದ ಮೊದಲಾರ್ಧದಲ್ಲಿ ಸುಮಿತ್ ಮತ್ತೊಂದು ಗೋಲ್ ಬಾರಿಸಿ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು.

ಮೂರನೇ ಕ್ವಾರ್ಟರ್‌ನಲ್ಲಿ ಎರಡೂ ಕಡೆಯಿಂದ ಸಾಕಷ್ಟು ಆಟ ಕಂಡುಬಂದರೂ, ಗೋಲು ಗಳಿಸಲು ಆಗಲಿಲ್ಲ.  ಪಂದ್ಯದ ಕೊನೆಯ 15 ನಿಮಿಷಗಳಲ್ಲಿ ದಕ್ಷಿಣ ಆಫ್ರಿಕಾ ಗೋಲು ಗಳಿಸುವ ಪ್ರಯತ್ನವನ್ನು ಭಾರತ ತಪ್ಪಿಸಿತು. 

ಭಾರತ ಭಾನುವಾರ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT