ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕಲ್‌ ಜೋರ್ಡಾನ್‌ ಧರಿಸಿದ್ದ ‘ಶೂ‘ ದಾಖಲೆ $2.2 ಮಿಲಿಯನ್‌ಗೆ ಮಾರಾಟ

Last Updated 12 ಏಪ್ರಿಲ್ 2023, 6:58 IST
ಅಕ್ಷರ ಗಾತ್ರ

ಬಾಸ್ಕೆಟ್‌ಬಾಲ್‌ ದಿಗ್ಗಜ ಮೈಕಲ್‌ ಜೆಫ್ರಿ ಜೋರ್ಡಾನ್‌ ಅವರು 1998ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13‘ ಶೂ ದಾಖಲೆ $2.2 ಮಿಲಿಯನ್‌ಗೆ(₹180,545,950) ಮಾರಾಟವಾಗಿದೆ.ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎಂದೆನಿಸಿದೆ. ಇದೇ ಆಟದಲ್ಲಿ ಧರಿಸಿದ್ದ ಜೆರ್ಸಿ $10.1 ಮಿಲಿಯನ್‌ಗೆ ಮಾರಾಟವಾಗಿತ್ತು.

ಈ ಹಿಂದೆ ಅಂದರೆ 2021ರಲ್ಲಿ ಅಮೆರಿಕದ ಜನಪ್ರಿಯ ರ್ಯಾಪ್‌ ಹಾಡುಗಾರ, ಯೀಜಿ(yeezy) ಕಂಪನಿಯ ಮಾಲೀಕ ಕಾನ್ಯೆ ವೇಸ್ಟ್‌ ಅವರ ‘ನೈಕ್ ಏರ್ ಯೀಜಿ 1‘ ಎಂಬ ಸ್ನೀಕರ್‌ ಈ ದಾಖಲೆಯನ್ನು ಹೊಂದಿತ್ತು. ಈ ಸ್ನೀಕರ್‌ಅನ್ನು ಅಮೆರಿಕ ಮೂಲದ ದಲ್ಲಾಳಿ ಕಂಪೆನಿ ಸೋಥೆಬಿಸ್‌(Sotheby's) ಸುಮಾರು $1.8 ಮಿಲಿಯನ್‌ಗೆ ಮಾರಟ ಮಾಡಿತ್ತು. ಇದೇ ವೇಳೆ ಜೋರ್ಡಾನ್‌ ಅವರ ನೈಕ್‌ ‘ಏರ್‌ ಶಿಪ್‘ ಶೂ $1.47 ಮಿಲಿಯನ್‌ಗೆ ಮಾರಟವಾಗಿತ್ತು.


1998ರಲ್ಲಿ ನಡೆದ ‘ಎನ್‌ಬಿಎ ಫೈನಲ್‌ ಗೇಮ್‌ 2‘ ಸರಣಿಯಲ್ಲಿ ಚಿಕಾಗೋ ಬುಲ್ಸ್‌(ಜೋರ್ಡಾನ್‌ ಪ್ರತಿನಿಧಿಸಿದ ತಂಡ) ಮತ್ತು ಉತಾಹ್‌ ಜಾಝ್‌(utah jazz) ನಡುವೆ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯವು ಜೋರ್ಡಾನ್‌ ಅವರ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ಜೋರ್ಡಾನ್‌ ‘ಏರ್ ಜೋರ್ಡಾನ್ 13‘ ಸ್ನೀಕರ್ಸ್ ಧರಿಸಿದ್ದರು. ಉತಾಹ್ ಜಾಝ್ ವಿರುದ್ಧ ಬುಲ್ಸ್ 93-88 ಅಂತರದಲ್ಲಿ ಗೆಲುವು ಪಡೆದು ಚಾಂಪಿಯನ್‌ ಆಗಿತ್ತು. ಈ ಪಂದ್ಯವನ್ನು ‘ಲಾಸ್ಟ್‌ ಡ್ಯಾನ್ಸ್‌‘ ಎಂದು ಕರೆಯಲಾಗಿದೆ.

ಜೋರ್ಡಾನ್‌ ವೃತ್ತಿಪರ ಬಾಸ್ಕೆಟ್‌ಬಾಲ್‌ ಆಟಗಾರರಾಗಿದ್ದು, ಚಿಕಾಗೋ ಬುಲ್ಸ್‌ ತಂಡದಲ್ಲಿ ಪ್ರತಿನಿಧಿಸಿ ಸುಮಾರು 15 ಎನ್‌ಬಿಎ ಸರಣಿಯಲ್ಲಿ ಆಡಿದ್ದಾರೆ. ಆರು ಬಾರಿ ಎನ್‌ಬಿಎ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. 1980 ಮತ್ತು 1990 ರ ದಶಕದಲ್ಲಿ ವಿಶ್ವದಾದ್ಯಂತ ಬಾಸ್ಕೆಟ್‌ಬಾಲ್‌ ಜನಪ್ರಿಯತೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT