ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಬಾಕ್ಸಿಂಗ್ ಕ್ವಾಲಿಫೈಯರ್‌: ನಿಶಾಂತ್ ದೇವ್‌ಗೆ ಒಲಿಂಪಿಕ್ಸ್ ಟಿಕೆಟ್ 

ಅರ್ಹತೆ ಪಡೆದ ಮೊದಲ ಪುರುಷ ಕುಸ್ತಿಪಟು
Published 31 ಮೇ 2024, 16:42 IST
Last Updated 31 ಮೇ 2024, 16:42 IST
ಅಕ್ಷರ ಗಾತ್ರ

ಬ್ಯಾಂಕಾಕ್: ಭಾರತದ ನಿಶಾಂತ್ ದೇವ್ (71 ಕೆ.ಜಿ) ಶುಕ್ರವಾರ ಇಲ್ಲಿ ನಡೆದ ಎರಡನೇ ವಿಶ್ವ ಬಾಕ್ಸಿಂಗ್ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಪುರುಷ ಬಾಕ್ಸರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹಿಂದಿನ ಅರ್ಹತಾ ಪಂದ್ಯಗಳಲ್ಲಿ ಒಲಿಂಪಿಕ್ ಸ್ಥಾನವನ್ನು ತಪ್ಪಿಸಿಕೊಂಡಿದ್ದ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ, ಕ್ವಾರ್ಟರ್ ಫೈನಲ್‌ನಲ್ಲಿ ಮೊಲ್ಡೊವಾದ ವಾಸಿಲೆ ಸೆಬೊಟಾರಿ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಕೋಟಾ ಪಡೆದರು.

ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತಿ ಪವಾರ್‌ (54 ಕೆಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಏಷ್ಯನ್ ಕ್ರೀಡಾಕೂಟದ ಮೂಲಕ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದ್ದಾರೆ. ನಿಶಾಂತ್ ದೇವ್‌  ಭಾರತದ ನಾಲ್ಕನೇ ಕೋಟಾ ಸ್ಥಾನವಾಗಿದೆ.

71 ಕೆ.ಜಿ ತೂಕದ ವಿಭಾಗದ ಐದು ಕೋಟಾಗಳನ್ನು ನೀಡಲಾಯಿತು. 

ಈ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ ದೇವ್, ತೀಕ್ಷ್ಣ ಮತ್ತು ಕರಾರುವಾಕ್ ಪಂಚ್‌ಗಳ ಮೂಲಕ ಎದುರಾಳಿ ಮೇಲೆ ದಾಳಿ ನಡೆಸಿದರು. ಎರಡನೇ ಸುತ್ತಿನಲ್ಲಿ ಸೆಬೊಟಾರಿ ಅವರ ಪಂಚ್‌ನಿಂದಾಗಿ ದೇವ್‌ ಸ್ವಲ್ಪ ಒತ್ತಡಕ್ಕೆ ಒಳಗಾದರಜು. ಆದರೆ, ನಂತರದಲ್ಲಿ ಚುರುಕಿನ ಆಟ ಪ್ರದರ್ಶಿಸಿದರು.  

ಕೊನೆಯ ಮೂರು ನಿಮಿಷಗಳಲ್ಲಿ ಇಬ್ಬರೂ ಬಾಕ್ಸರ್‌ಗಳು ಆಕ್ರಮಣಕಾರಿ ಆಟಕ್ಕೆ ಇಳಿದರು. ಅಂತಿಮವಾಗಿ ದೇವ್ ಮೇಲುಗೈ ಸಾಧಿಸಿದರು.   

ಇದಕ್ಕೂ ಮುನ್ನ ಮಹಿಳೆಯರ 60 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಅಂಕುಶಿತಾ ಬೋರೊ ಅವರು ಸ್ವೀಡನ್‌ ಆಗ್ನೆಸ್ ಅಲೆಕ್ಸಿಯಸನ್ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿದರು.

ಮಾಜಿ ವಿಶ್ವ ಯೂತ್ ಚಾಂಪಿಯನ್ ಬೋರೊ ಕಠಿಣ ಹೋರಾಟ ನಡೆಸಿದರು. ಆದರೆ, ಮಾಜಿ ಯುರೋಪಿಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಅನುಭವದ ಮುಂದೆ ಇವರ ಆಟ ನಡೆಯಲಿಲ್ಲ. ಮೊದಲ ಸುತ್ತಿನ ಕೊನೆಯಲ್ಲಿ ನೇರ ಹೊಡೆತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು.  

ಇಬ್ಬರೂ ಸಮಾನ ಅಂಕಗಳೊಂದಿಗೆ ಮೂರನೇ ಸುತ್ತು ಪ್ರವೇಶಿಸಿದರು. ಆದರೆ ಅಂತಿಮವಾಗಿ ಅಲೆಕ್ಸಿಯಸ್ಸನ್ ಗೆಲುವು ದಕ್ಕಿಸಿಕೊಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT