ಪ್ಯಾರಿಸ್: ಭಾರತದ ಮಹೇಶ್ವರಿ ಚೌಹಾನ್ ಮತ್ತು ಅನಂತ್‌ಜೀತ್ ಸಿಂಗ್ ನರುಕಾ ಜೋಡಿ ಶೂಟಿಂಗ್ ಸ್ಪರ್ಧೆಯ ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕದ ಹೋರಾಟಕ್ಕೆ ಅರ್ಹತೆ ಗಿಟ್ಟಿಸಿದೆ.
ಈ ಜೋಡಿ, ಅರ್ಹತಾ ಸುತ್ತಿನ ಪಂದ್ಯದಲ್ಲಿ ಒಟ್ಟು 146 ಪಾಯಿಂಟ್ ಕಲೆಹಾಕಿತು.
ಮೊದಲ ಸುತ್ತಿನಲ್ಲಿ 24 ಪಾಯಿಂಟ್ ಕಲೆಹಾಕಿದ ಚೌಹಾನ್, ನಂತರದ ಎರಡು ಸುತ್ತುಗಳಲ್ಲಿ ತಲಾ 25 ಪಾಯಿಂಟ್ ಗಳಿಸಿದರು. ನರುಕಾ ಕ್ರಮವಾಗಿ 25, 23, 24 ಪಾಯಿಂಟ್‌ಗೆ ಗುರಿ ಇಟ್ಟರು.
ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಚೀನಾದ ಜಿಯಾಂಗ್ ಯಿಟಿಂಗ್ ಮತ್ತು ಲಿಯು ಜಿಯಾನ್‌ಲಿನ್ ಸವಾಲು ಎದುರಿಸಲಿದೆ. ಈ ಜೋಡಿಯೂ ಅರ್ಹತಾ ಸುತ್ತಿನಲ್ಲಿ 146 ಪಾಯಿಂಟ್ ಕಲೆಹಾಕಿದೆ.
ಇಟಲಿ (149) ಹಾಗೂ ಅಮೆರಿಕ (148) ತಂಡಗಳು ಈ ವಿಭಾಗದಲ್ಲಿ 'ಬಂಗಾರದ' ಭೇಟೆಯಾಡಲಿವೆ.