ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌: ಪ್ರಜ್ಞಾನಂದಗೆ ಡೇನಿಯಲ್‌ ಎದುರಾಳಿ

Published 2 ಜುಲೈ 2024, 20:51 IST
Last Updated 2 ಜುಲೈ 2024, 20:51 IST
ಅಕ್ಷರ ಗಾತ್ರ

ಬುಖಾರೆಸ್ಟ್‌ (ರೊಮೇನಿಯಾ): ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಸೂಪರ್‌ಬೆಟ್‌ ಕ್ಲಾಸಿಕ್ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಡೀಕ್ ಬೊಗ್ಡಾನ್ ಡೇನಿಯಲ್ (ರೊಮೇನಿಯಾ) ಅವರನ್ನು ಎದುರಿಸಲಿದ್ದಾರೆ. ಡೇನಿಯಲ್‌ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಭಾರತದ ಇನ್ನೊಬ್ಬ ಚೆಸ್‌ ತಾರೆ, ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಚಾಲೆಂಜರ್ ಆಗಿರುವ ಗುಕೇಶ್‌, ಇನ್ನೊಂದು ಪಂದ್ಯದಲ್ಲಿ ಮ್ಯಾಕ್ಸಿಮ್‌ ವೇಷಿಯಲ್ ಲಗ್ರಾವ್‌ (ಫ್ರಾನ್ಸ್‌) ಅವರ ವಿರುದ್ಧ ಆಡಲಿದ್ದಾರೆ.

ಟೂರ್ನಿಯಲ್ಲಿ ಫ್ಯಾಬಿಯಾನೊ ಕರುವಾನಾ (3.5) ಅಗ್ರಸ್ಥಾನದಲ್ಲಿದ್ದಾರೆ. ಗುಕೇಶ್, ಪ್ರಜ್ಞಾನಂದ ತಲಾ ಮೂರು ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಹತ್ತು ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿ ಗ್ರ್ಯಾಂಡ್‌ ಚೆಸ್ ಟೂರ್‌ನ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT