ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರುವಾಗ ಚಿನ್ನದ ಪದಕ ತನ್ನಿ: ಮಹಿಳಾ ಹಾಕಿ ತಂಡಕ್ಕೆ ಶಾರುಖ್ ಅಭಿನಂದನೆ

Last Updated 2 ಆಗಸ್ಟ್ 2021, 11:42 IST
ಅಕ್ಷರ ಗಾತ್ರ

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿರುವ ದೇಶದ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

ಇದೇ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ಮಹಿಳಾ ಹಾಕಿ ತಂಡಕ್ಕೆ ಶುಭ ಕೋರಿದ್ದು ಮಾತ್ರವಲ್ಲದೆ, ಬರುವಾಗ ಚಿನ್ನ ಗೆದ್ದು ಬನ್ನಿ ಎಂದು ಶುಭಹಾರೈಸಿದ್ದಾರೆ.

ಟೀಂ ಇಂಡಿಯಾ ಮಹಿಳಾ ಹಾಕಿ ತಂಡದ ಕೋಚ್ ಸೋರ್ಡ್ ಮ್ಯಾರಿನ್, ತಂಡದ ಜತೆಗೆ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

‘ಚಕ್ ದೇ ಇಂಡಿಯಾ’ ಎನ್ನುವ ಹಾಕಿ ಆಟದ ಕುರಿತಾದ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್, ‘ಕಬೀರ್ ಖಾನ್’ ಹೆಸರಿನ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT