ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿರುವುದಕ್ಕೆ ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ವಿಶೇಷ ರೀತಿಯ ಸಂಭ್ರಮಾಚರಣೆಗಳ ಬಗ್ಗೆಯೂ ವರದಿಯಾಗುತ್ತಿವೆ.

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ‘ಮೇರೇ ದೇಶ್ ಕೀ ಧರ್ತೀ ಸೋನಾ ಉಗ್ಲೇ’ ಹಾಡು ಹಾಡಿ ಕುಣಿದು ಸಂಭ್ರಮಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಓದಿ:Olympics: ಐತಿಹಾಸಿಕ ಕ್ಷಣ; ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

ಓದಿ:PHOTOS: ನೀರಜ್ ಬಂಗಾರದ ಎಸೆತ, ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಪದಕದ ಗರಿ...

ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಭಾರತ – ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುನಿಲ್ ಗವಾಸ್ಕರ್ ಅವರಿಗೆ ನೀರಜ್ ಚೋಪ್ರಾ ಚಿನ್ನ ಗೆದ್ದ ವಿಚಾರ ತಿಳಿದಾಗ ಸಂಭ್ರಮದ ಭಾವವನ್ನು ತಡೆಹಿಡಿಯಲಾಗಲಿಲ್ಲ. ತಕ್ಷಣವೇ ಎದ್ದುನಿಂತ ಅವರು, 1967ರ ಮನೋಜ್ ಕುಮಾರ್ ಅಭಿನಯದ ‘ಉಪಕಾರ್’ ಸಿನಿಮಾದ, ಮಹೇಂದ್ರ ಕಪೂರ್ ಹಾಡಿದ್ದ ‘ಮೇರೇ ದೇಶ್ ಕೀ ಧರ್ತೀ’ ಹಾಡು ಹಾಡಿ ಕುಣಿಯಲಾರಂಭಿಸಿದರು. ಅಷ್ಟರಲ್ಲಿ ಅವರೊಂದಿಗಿದ್ದವರೂ ಜತೆ ಹೆಜ್ಜೆಹಾಕಿ ಸಂಭ್ರಮಿಸಿದರು. ಈ ದೃಶ್ಯದ ತುಣುಕನ್ನು ಅನೇಕ ಮಂದಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಓದಿ:Tokyo Olympics: ನೀರಜ್ ಚೋಪ್ರಾಗೆ ಪ್ರಧಾನಿ ಸೇರಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.