ಟೋಕಿಯೊ: ಅಮೋಘ ಪ್ರದರ್ಶನನೀಡಿರುವ ಭಾರತದ ಬಾಕ್ಸರ್ ಸತೀಶ್ ಕುಮಾರ್, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರಸೂಪರ್ ಹೆವಿವೇಟ್ (91+ ಕೆ.ಜಿ.) ವಿಭಾಗದಲ್ಲಿ 32 ವರ್ಷದ ಸತೀಶ್, ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4-1ರ ಅಂತರದ ಗೆಲುವು ದಾಖಲಿಸಿದರು.

ಇದನ್ನೂ ಓದಿ:Tokyo Olympics | 'ಸೂಪರ್' ಸಿಂಧು ಕ್ವಾರ್ಟರ್ಫೈನಲ್ಗೆ ಪ್ರವೇಶ

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿರುವ ಸತೀಶ್, ಬಾಕ್ಸಿಂಗ್ ರಿಂಗ್ನಲ್ಲಿ ನಿಖರ ಪಂಚ್ಗಳ ಮೂಲಕ ಎದುರಾಳಿ ಮೇಲೆ ಹಿಡಿತ ಸಾಧಿಸಿದರು.

ಕ್ವಾರ್ಟರ್ಫೈನಲ್ನಲ್ಲಿ ಸತೀಶ್ ಅವರಿಗೆ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೊವ್ ಸವಾಲು ಎದುರಾಗಲಿದೆ.

ಸತೀಶ್ ಕುಮಾರ್ ಅವರು ಏಷ್ಯನ್ ಗೇಮ್ಸ್ನಲ್ಲಿಎರಡು ಬಾರಿ ಕಂಚು ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

31 ವರ್ಷದ ಬ್ರೌನ್, 1996ರ ಬಳಿಕ ಜಮೈಕಾದಿಂದ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಬಾಕ್ಸರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ಬ್ರೌನ್ ಅವರಿಗೆ ಜಮೈಕಾದ ಧ್ವಜಧಾರಿಯಾಗುವ ಅದೃಷ್ಟವು ಒಲಿದು ಬಂದಿತ್ತು. 2014ರ ವರೆಗೆ ಬಾಣಸಿಗರಾಗಿ ದುಡಿದಿರುವ ಬ್ರೌನ್ ಕಠಿಣ ಪರಿಶ್ರಮದ ಮೂಲಕ ಬಾಕ್ಸಿಂಗ್ ರಿಂಗ್ನಲ್ಲಿ ಹೆಸರು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.