ಪ್ಯಾರಿಸ್: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಕ್ರೀಡಾ ನ್ಯಾಯ ಮಂಡಳಿಯ (ಸಿಎಎಸ್) ತಾತ್ಕಾಲಿಕ ವಿಭಾಗವು ಇಂದು (ಶನಿವಾರ) ರಾತ್ರಿ ಪ್ರಕಟಿಸಲಿದೆ.

ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ವಿನೇಶ್ ಅವರನ್ನು ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.

ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ (ಅಡ್–ಹಾಕ್), ತಮ್ಮ ವಿರುದ್ಧದ ಕ್ರಮ ಪ್ರಶಸ್ನಿ ವಿನೇಶ್ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು.

ವಿನೇಶ್ ಅವರು, ಫೈನಲ್ ಪಂದ್ಯದ ಮುನ್ನಾದಿನ ಮೂರು ಪಂದ್ಯಗಳಲ್ಲಿ ಸೆಣಸಿದ್ದರು. ಆ ದಿನ ನಿಗದಿತ ತೂಕದ ಮಿತಿಯಲ್ಲಿ ಇದ್ದ ಕಾರಣ ತಮಗೆ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಕೋರಿದ್ದರು. ಮೇಲ್ಮನವಿಯ ವಿಚಾರಣೆಯು ಶುಕ್ರವಾರವೇ ಪೂರ್ಣಗೊಳಿಸಲಾಗಿದೆ.
.Vinesh Phogat Retires: ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್.ಮಹಿಳೆಯರ ಕ್ರೀಡೆಗೆ ಕಳೆ ತಂದ ಹರಿಯಾಣ ಹುಡುಗಿ: ಫೋಗಟ್ ಅಖಾಡದ ಕಲಿ ವಿನೇಶ್.
ತಾತ್ಕಾಲಿಕ ವಿಭಾಗದ ಅಧ್ಯಕ್ಷರು, ಸಿಎಎಸ್ ಮಂಡಳಿಯ ನಿಯಮಗಳ ಆರ್ಟಿಕಲ್ 18ರ ಅನ್ವಯ, ತೀರ್ಪು ಪ್ರಕಟಿಸಲು ಸಮಯ ಮಿತಿಯನ್ನು 2024ರ ಆಗಸ್ಟ್ 10, ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ) ವಿಸ್ತರಿಸಿದ್ದಾರೆ ಎಂದು ಸಿಎಎಸ್ ತಿಳಿಸಿದೆ.

ಒಂದೇ ದಿನ ಮೂರು ಹಣಾಹಣಿ
ವಿನೇಶಾ ಅವರು ಮಂಗಳವಾರ (ಆಗಸ್ಟ್ 6ರಂದು) ಒಂದೇ ದಿನ ನಡೆದ ಮೂರು ಹಣಾಹಣಿಗಳಲ್ಲಿ ಎದುರಾಳಿಗಳ ಎಡೆಮುರಿ ಕಟ್ಟಿ ಫೈನಲ್ ತಲುಪಿದ್ದರು.

ವಿಶ್ವ ಚಾಂಪಿಯನ್ ಮತ್ತು ಕಳೆದ ಬಾರಿಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, ಜಪಾನಿನ ಯುಯಿ ಸುಸಾಕಿ ಅವರನ್ನು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮತ್ತು ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ್ದರು. ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ಅವರನ್ನು ಮಣಿಸಿದ್ದರು.

ವಿನೇಶ್ ಅನರ್ಹತೆಯಿಂದಾಗಿ ಲೊಪೇಜ್ ಅವರಿಗೆ ಫೈನಲ್ ಟಿಕೆಟ್ ಲಭಿಸಿತ್ತು. ಸುಸಾಕಿ ಹಾಗೂ ಲಿವಾಚ್ ಅವರಿಗೂ ಕಂಚಿನ ಪದಕಕ್ಕೆ ಹೋರಾಡುವ ಅವಕಾಶ ದೊರಕಿತ್ತು.

ಆಗಸ್ಟ್ 7ರಂದು ನಡೆದ ಫೈನಲ್‌ನಲ್ಲಿ ಗೆದ್ದ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಲೊಪೇಜ್‌ಗೆ ಬೆಳ್ಳಿ, ಚೀನಾದ ಫೆಂಗ್ ಝಿಕಿ ಮತ್ತು ಸುಸಾಕಿಗೆ ಕಂಚು ಲಭಿಸಿದೆ.
.Paris Olympics | ವಿನೇಶ್ ಫೋಗಟ್ ಅನರ್ಹ; ಅಮೆರಿಕದ ಸಾರಾಗೆ ಚಿನ್ನ.ವಿನೇಶ್ ಫೋಗಟ್ ಟೀಕೆ ಎದುರಿಸಲಿ: Olympics ಪದಕ ವಿಜೇತೆ ಸೈನಾ ಹೀಗೆ ಹೇಳಿದ್ದೇಕೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.