ಬೆಂಗಳೂರು: ಆಳ್ವಾಸ್ ಮಂಗಳೂರು ಹಾಗೂ ಆದಾಯ ತೆರಿಗೆ ತಂಡಗಳು ರಾಜ್ಯ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ಎ. ಲೋಕೇಶ್ ಗೌಡ ಸ್ಮರಣಾರ್ಥ ಟ್ರೋಫಿಗಾಗಿ ನಡೆದ ರಾಜ್ಯ ಸೀನಿಯರ್ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ಫೈನಲ್ನಲ್ಲಿ ಆಳ್ವಾಸ್ ತಂಡವು 3–1ರಿಂದ (25–22, 21–25, 25–23, 25–22) ರಾಜ್ಯ ಪೊಲೀಸ್ ತಂಡವನ್ನು ಸೋಲಿಸಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಆಳ್ವಾಸ್ ಆಟಗಾರರು ಪ್ರಶಸ್ತಿಗೆ ಮುತ್ತಿಕ್ಕಿದರು.

ಮಹಿಳೆಯರ ಪ್ರಶಸ್ತಿ ಸುತ್ತಿನಲ್ಲಿ ಆದಾಯ ತೆರಿಗೆ ತಂಡವು 3–1ರಿಂದ (23–25, 25–11, 25–17, 25–16) ಪೋಸ್ಟಲ್ ತಂಡವನ್ನು ಮಣಿಸಿತು. ಆರಂಭದ ಹಿನ್ನಡೆಯಿಂದ ಪುಟಿದೆದ್ದ ಆದಾಯ ತೆರಿಗೆ ತಂಡವು ನಂತರದಲ್ಲಿ ಪಾರಮ್ಯ ಮೆರೆಯಿತು.

ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.