ರಾಜ್ಯಮಟ್ಟದ 25ನೇ ವಾಲಿಬಾಲ್ ಚಾಂಪಿಯನ್‌ಷಿಪ್: ದಾವಣಗೆರೆಗೆ ಜಯ

ಮೈಸೂರು: ಉತ್ತಮ ಆಟವಾಡಿದ ಮುಬಾರಕ್ ನೆರವಿನಿಂದ ದಾವಣಗೆರೆ ತಂಡದವರು ರಾಜ್ಯಮಟ್ಟದ 25ನೇ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗದುಗಿನ ವಿರುದ್ಧ ಜಯ ಸಾಧಿಸಿದರು.
ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 23–25, 25–11, 15–11ರಿಂದ ಎದುರಾಳಿ ತಂಡದವರನ್ನು ಮಣಿಸಿದರು.
ಮೊದಲ ಸೆಟ್‌ನಲ್ಲಿ ಸೋತರೂ, ಪುಟಿದೆದ್ದ ದಾವಣಗೆರೆ ತಂಡದವರು 25–11 ಅಂತರದಲ್ಲಿ ಸಮಬಲ ಸಾಧಿಸಿದ್ದರು. 3ನೇ ಸೆಟ್‌ನಲ್ಲಿ ಅತ್ಯತ್ತಮ ಸರ್ವ್, ಬ್ಲಾಕಿಂಗ್ ಹಾಗೂ ಪಾಸಿಂಗ್ ಮೂಲಕ ಎಂ.ಪಿ.ಮುಬಾರಕ್ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಚಿಕ್ಕಬಳ್ಳಾಪುರ ತಂಡದವರು 25–20, 25–19ರಿಂದ ದಾವಣಗೆರೆ ವಿರುದ್ಧ ಗೆದ್ದಿದ್ದರು.
ತುಮಕೂರು 25–18, 25–23ರಿಂದ ರಾಮನಗರದ ಎದುರು, ಬಳ್ಳಾರಿ 25–20, 25–17ರಿಂದ ವಿಜಯನಗರದ ಎದುರು, ಚಿಕ್ಕಬಳ್ಳಾಪುರ 18–25, 25–21, 15–9ರಿಂದ ಬೆಂಗಳೂರು ದಕ್ಷಿಣದ ಎದುರು, ದಕ್ಷಿಣ ಕನ್ನಡ 25–15, 25–16ರಿಂದ ಶಿವಮೊಗ್ಗದ ಎದುರು ಜಯಿಸಿದವು.
ಮಹಿಳಾ ವಿಭಾಗದಲ್ಲಿ ಗದಗ 25–1, 25–2ರಿಂದ ವಿಜಯನಗರ ವಿರುದ್ಧ; ಮೈಸೂರು 25–4, 25–7ರಿಂದ ಬೆಂಗಳೂರು ಕೇಂದ್ರ ತಂಡದ ವಿರುದ್ಧ ಗೆಲುವು ಸಾಧಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.