ಶನಿವಾರ, ಸೆಪ್ಟೆಂಬರ್ 18, 2021
30 °C
ಬಾಕ್ಸಿಂಗ್‌: ಕಣದಲ್ಲಿ ಭಾರತದ 9 ಮಂದಿ; ವಿಕಾಸ್ ಕೃಷನ್‌ಗೆ ಜಪಾನ್‌ನ ಒಕಜಾವ ಎದುರಾಳಿ

Tokyo Olympic| ಬಾಕ್ಸಿಂಗ್‌: ಪದಕಕ್ಕೆ ‘ಪಂಚ್’ ಮಾಡುವ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಸ್ಥಳೀಯ ಕ್ರೀಡಾಪಟು ಮೆನ್ಸಾ ಒಕಜಾವ ಎದುರು ಸೆಣಸುವ ಮೂಲಕ ವಿಕಾಸ್ ಕೃಷನ್  ಬಾಕ್ಸಿಂಗ್‌ನಲ್ಲಿ ಶನಿವಾರ ಭಾರತದ ಸವಾಲು ಆರಂಭಿಸುವರು. ಮೇರಿ ಕೋಮ್‌, ಅಮಿತ್ ಪಂಘಾಲ್, ಪೂಜಾ ರಾಣಿ, ಮನೀಷ್ ಕೌಶಿಕ್ ಮುಂತಾದವರನ್ನು ಒಳಗೊಂಡ ಒಂಬತ್ತು ಮಂದಿ ಭಾರತದ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ.

ಮೊದಲ ದಿನ ಒಟ್ಟು 27 ಸ್ಪರ್ಧೆಗಳು ನಡೆಯಲಿವೆ. ಆದರೆ ಭಾರತದ ಪರವಾಗಿ 63 ಕೆಜಿ ವಿಭಾಗದಲ್ಲಿ ವಿಕಾಸ್ ಅವರ ಸ್ಪರ್ಧೆ ಮಾತ್ರ ಇದೆ. ಭಾನುವಾರ ಮೇರಿ ಕೋಮ್‌ ಮತ್ತು ಮನೀಷ್ ಕೌಶಿಕ್ ಕಣಕ್ಕೆ ಇಳಿಯಲಿದ್ದಾರೆ. 29 ವರ್ಷದ ವಿಕಾಸ್ ಕೃಷಣ್‌ಗೆ ಇದು ಮೂರನೇ ಒಲಿಂಪಿಕ್ಸ್ ಆಗಿದ್ದು ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಅವರ ಎದುರಾಳಿ, 25 ವರ್ಷದ ಬಾಕ್ಸರ್ 2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.  

ಹರಿಯಾಣದ ಬಾಕ್ಸರ್‌ಗೆ ಮೊದಲ ಸವಾಲನ್ನು ಮೀರಲು ಸಾಧ್ಯವಾದರೆ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು ಕ್ಯೂಬಾದ ಮೂರನೇ ಶ್ರೇಯಾಂಕಿತ ರಿನೀಲ್ ಇಗ್ಲೆಸಿಸ್ ಅವರನ್ನು ಎದುರಿಸುವರು. ಇಗ್ಲಿಸಿಸ್ 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದು ಮಾಜಿ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. 

ಭಾರತದ ಎಲ್ಲ ಬಾಕ್ಸರ್‌ಗಳು ಕೂಡ ಕ್ರೀಡಾಕೂಟದಲ್ಲಿ ಪ್ರಬಲ ಎದುರಾಳಿಗಳ ವಿರುದ್ಧ ಸೆಣಸಬೇಕಾಗಿದೆ. 2008 ಮತ್ತು 2012ರಲ್ಲಿ ತಲಾ ಒಂದೊಂದು ಕಂಚಿನ ಪದಕ ಗೆದ್ದಿದ್ದ ಭಾರತ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಪದಕವನ್ನೂ ಗೆಲ್ಲಲಿಲ್ಲ. ಆ ನಿರಾಸೆ ಮರೆಯಲು ಈ ಬಾರಿ ಕಠಿಣ ಪ್ರಯತ್ನ ನಡೆಸಲಿದ್ದಾರೆ.

ಅಮಿತ್ ಪಂಘಾಲ್ ಅವರಿಗೆ ಇಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದ್ದು 52 ಕೆ.ಜಿ ವಿಭಾಗದಲ್ಲಿ ಅವರು ವಿಶ್ವದ ಒಂದನೇ ಕ್ರಮಾಂಕದ ಬಾಕ್ಸರ್ ಆಗಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್‌ಗೆ ಬೈ ಲಭಿಸಿರುವ ನಾಲ್ವರಲ್ಲಿ ಅವರೂ ಒಬ್ಬರು. ಅವರ ಮೊದಲ ಸ್ಪರ್ಧೆ 31ರಂದು ನಡೆಯಲಿದೆ. ಬೊಟ್ಸ್ವಾನಾದ ಮೊಹಮ್ಮದ್ ರಜಬ್ ಮತ್ತು ಕೊಲಂಬಿಯಾದ ರಿವಾಜ್ ಮಾರ್ಟಿನೆಜ್ ನಟುವಿನ ಹಣಾಹಣಿಯಲ್ಲಿ ಗೆದ್ದವರನ್ನು ಪಂಘಾಲ್ ಎದುರಿಸುವರು. ಮಾರ್ಟಿನೆಸ್ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಡೊಮಿನಿಕಾದ ಮಿಗ್ವೆಲಿನಾ ಹೆರ್ನಾಂಡಜ್ ಎದುರಾಳಿ. ಈ ಬೌಟ್‌ನಲ್ಲಿ ಗೆದ್ದರೆ ಮೂರನೇ ಶ್ರೇಯಾಂಕಿತೆ, ಕೊಲಂಬಿಯಾದ ಇಗ್ರಿಟ್ ಲೊರೆನಾ ವಿಕ್ಟೋರಿಯಾ ವಿರುದ್ಧ ಮೇರಿ ಕೋಮ್ ಸೆಣಸುವರು. 

91 ಕೆಜಿ ವಿಭಾಗದಲ್ಲಿ ಸತೀಶ್ ಕುಮಾರ್, 69 ಕೆಜಿ ವಿಭಾಗದಲ್ಲಿ ಲವ್ಲಿನಾ ಬೋರ್ಗೆಹೇನ್ ಮತ್ತು 60 ಕೆಜಿ ವಿಭಾಗದಲ್ಲಿ ಸಿಮ್ರನ್‌ಜೀತ್ ಕೌರ್ ಅವರಿಗೆ ಬೈ ಲಭಿಸಿದೆ. ಅಮೆರಿಕ, ಕ್ಯೂಬಾ, ಕಜಕಸ್ತಾನ ಮುಂತಾದ ದೇಶಗಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು