ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

Last Updated 20 ಫೆಬ್ರವರಿ 2023, 22:30 IST
ಅಕ್ಷರ ಗಾತ್ರ

ಸೋನಿಪತ್‌: ಪ್ರಮುಖ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಈ ವರ್ಷಾಂತ್ಯದಲ್ಲಿ ನಡೆ ಯಲಿರುವ ಏಷ್ಯನ್‌ ಗೇಮ್ಸ್, ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಮಾತೃತ್ವ ವಿರಾಮ ತೆಗೆದು ಕೊಂಡಿದ್ದ ದೀಪಿಕಾ ಅವರು ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಆದರೆ ಇಲ್ಲಿ ಸೋಮವಾರ ಕೊನೆಗೊಂಡ ಮಹಿಳಾ ರಿಕರ್ವ್‌ ವಿಭಾಗದ ಅಂತಿಮ ಹಂತದ ಆಯ್ಕೆ ಟ್ರಯಲ್ಸ್‌ನಲ್ಲಿ ಅಗ್ರ 8ರೊಳಗಿನ ಸ್ಥಾನ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕೋಮಲಿಕಾ ಬಾರಿ ಕೂಡ ಸ್ಥಾನ ಪಡೆಯಲು ವಿಫಲರಾದರು. ಭಜನ್ ಕೌರ್, ಅದಿತಿ ಜೈಸ್ವಾಲ್‌, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್ ಕೌರ್ ಅವರು ಮೂರೂ ಪ್ರಮುಖ ಟೂರ್ನಿಗಳಿಗೆ ಸ್ಥಾನ ಗಿಟ್ಟಿಸಿದ್ದಾರೆ. ದೀಪಿಕಾ ಅವರ ಪತಿ ಅತನು ದಾಸ್‌ ಸ್ಥಾನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT