ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಭಾರತ ತಂಡಗಳು

ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ: ವೈಶಾಲಿಗೆ ಚಿನ್ನ
Last Updated 23 ಅಕ್ಟೋಬರ್ 2020, 11:59 IST
ಅಕ್ಷರ ಗಾತ್ರ

ಚೆನ್ನೈ: ಅಗ್ರ ಶ್ರೇಯಾಂಕಿತ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್ ಚೆಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ. ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಮಹಿಳೆಯರು ಕಿರ್ಗಿಸ್ತಾನ ತಂಡವನ್ನು ಪರಾಭವಗೊಳಿಸಿದರೆ, ಪುರುಷರ ತಂಡವು ಮಂಗೋಲಿಯಾ ಸವಾಲು ಮೀರಿತು.

ಕಿರ್ಗಿಸ್ತಾನ ಎದುರು ನಡೆದ ಎರಡು ಪಂದ್ಯಗಳಲ್ಲಿ ಭಾರತದ ಮಹಿಳೆಯರು ಕ್ರಮವಾಗಿ 4–0 ಹಾಗೂ 3.5–0.5 ಪಾಯಿಂಟ್‌ಗಳಿಂದ ಸುಲಭವಾಗಿ ಜಯಗಳಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಭಾರತಕ್ಕೆ ಮಂಗೋಲಿಯಾ ಸವಾಲು ಎದುರಾಗಿದೆ.

ಪುರುಷರ ವಿಭಾಗದ ಎಂಟರಘಟ್ಟದ ಸೆಣಸಾಟದಲ್ಲಿ ಮಂಗೋಲಿಯಾ ಆಟಗಾರರು, ಭಾರತಕ್ಕೆ ಭಾರಿ ಸವಾಲು ಒಡ್ಡಿದರು. ಎರಡೂ ಪಂದ್ಯಗಳನ್ನು ಭಾರತ 2.5–1.5 ರಲ್ಲಿ ಗೆದ್ದು ಬೀಗಿತು. ಸೆಮಿಫೈನಲ್‌ನಲ್ಲಿ ಭಾರತದ ಪಟುಗಳುಇರಾನ್‌ ವಿರುದ್ಧ ಸೆಣಸಲಿದ್ದಾರೆ.

ಭಾರತದ ಯುವ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಅವರು ತಾವಾಡಿದ ಎರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದರು. ಅವರು ಅಲೆಕ್ಸಾಂಡ್ರಾ ಸಮಗನೊವಾ ಅವರಿಗೆ ಸೋಲುಣಿಸಿದರೆ, ಪದ್ಮಿಣಿ ರಾವತ್‌ ಹಾಗೂ ಪಿ.ವಿ.ನಂದಿತಾ ಅವರೂ ಜಯ ಸಾಧಿಸಿದರು.

ಪ್ರಿಲಿಮನರಿ ಸುತ್ತಿನಲ್ಲಿ ವೈಶಾಲಿ ಸಂಪೂರ್ಣ ಪಾರಮ್ಯ ಮೆರೆದರು. ಒಂಬತ್ತು ಸುತ್ತುಗಳಲ್ಲಿ 6.5 ಪಾಯಿಂಟ್ಸ್‌ ಕಲೆಹಾಕಿ ಚಿನ್ನದ ಪದಕ ಗೆದ್ದರೆ, ತಂಡದ ನಾಯಕಿ ಮೇರಿ ಆ್ಯನ್‌ ಗೋಮ್ಸ್ ಅವರೂ ಐದು ಸುತ್ತುಗಳಲ್ಲಿ ಜಯಗಳಿಸಿ ಚಿನ್ನಕ್ಕೆ ಮುತ್ತಿಟ್ಟರು.

ಪದ್ಮಿಣಿ ರಾವತ್‌ ಬೆಳ್ಳಿ ಪದಕ ಗೆದ್ದರು.

ಪುರುಷರ ವಿಭಾಗದಲ್ಲಿ ಅನುಭವಿ ಪಟು ಕೆ.ಶಶಿಕಿರಣ್‌ ಬೆಳ್ಳಿ ಪದಕ ಗಳಿಸಿದರು. ಮಂಗೋಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ನಿಹಾಲ್‌ ಸರಿನ್‌ ಸೋಲು ಅನುಭವಿಸಿದರು. ಎಸ್‌.ಪಿ.ಸೇತುರಾಮನ್‌ ಹಾಗೂ ಶಶಿಕಿರಣ್‌ ತಾವಾಡಿದ ಪಂದ್ಯಗಳಲ್ಲಿ ಜಯ ಗಳಿಸಿದರು. ನಾಯಕ ಸೂರ್ಯಶೇಖರ್‌ ಗಂಗೂಲಿ ಡ್ರಾ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT