ಬುಧವಾರ, ಜೂನ್ 3, 2020
27 °C

ಕೋವಿಡ್‌: ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಮುಂದೂಡಿಕೆ

ಪಿಟಿಐ/ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ 19 ಸೋಂಕು ಭೀತಿಗೆ ಭಾರತದಲ್ಲಿ ಮೊದಲ ಬಾರಿ ಟೂರ್ನಿಯೊಂದನ್ನು ಮುಂದೂಡಲಾಗಿದೆ.

‘ಬೆಂಗಳೂರಿನಲ್ಲಿ ಇದೇ 18ರಿಂದ 26ರವರೆಗೆ ನಡೆಯಬೇಕಿದ್ದ ಫಿಬಾ ಒಲಿಂಪಿಕ್ಸ್‌ ಅರ್ಹತಾ 3X3 ಬ್ಯಾಸ್ಕೆಟ್‌ಬಾಲ್‌ ಟೂರ್ನಿಯನ್ನು ಮುಂದಕ್ಕೆ ಹಾಕಲಾಗಿದೆ’ ಎಂದು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಫಿಬಾ) ಬುಧವಾರ ಹೇಳಿದೆ.

ಹಂಗರಿಯ ಬುಡಾಪೆಸ್ಟ್‌ನಲ್ಲಿ ಏಪ್ರಿಲ್‌ 24ರಿಂದ ಫಿಬಾ 3X3 ಯೂನಿವರ್ಸಿಟಿ ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಿಗದಿಯಾಗಿದೆ. ಅದಕ್ಕಿಂತ ಮುನ್ನ ಬೆಂಗಳೂರಿನಲ್ಲಿ ನಿಗದಿಯಾಗಿರುವ ಟೂರ್ನಿ ನಡೆಸುವ ಅಗತ್ಯವಿದ್ದು, ಇದಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕುರಿತು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಸಹಕಾರದೊಂದಿಗೆ ನಾವು  ಕೆಲಸ ಮಾಡುತ್ತಿದ್ದೇವೆ’ ಎಂದು ಫಿಬಾ ತಿಳಿಸಿದೆ.

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸ್ಥಳಾಂತರ: ಚೀನಾದ ವುಹಾನ್‌ ನಗರದಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಅನ್ನು ಫಿಲಿಪ್ಪೀನ್ಸ್‌ ರಾಜಧಾನಿ ಮನಿಲಾಕ್ಕೆ ಸ್ಥಳಾಂತರ ಮಾಡಲಾಗಿದೆ. ಕೋವಿಡ್‌ 19 ಸೋಂಕಿನ ಭೀತಿಯ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮನಿಲಾದಲ್ಲಿ ಏಪ್ರಿಲ್‌ 21ರಿಂದ 26ರವರೆಗೆ ನಡೆಯಲಿದೆ.

‘ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರು ಹಾಗೂ ಅಧಿಕಾರಿಗಳಿಗೆ ವೀಸಾ ಲಭಿಸುವಂತೆ ಮಾಡಲು ಬ್ಯಾಡ್ಮಿಂಟನ್‌ ಏಷ್ಯಾ (ಬಿಎ) ಫಿಲಿಪ್ಪೀನ್ಸ್ ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಕಾರದೊಂದಿಗೆ ಕೆಲಸ ಮಾಡಲಿದೆ’ ಎಂದು ಬಿಎ ಹೇಳಿದೆ.

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸ್ಥಳಾಂತರ
ಶಾಂಘೈ:
ಚೀನಾ ವುಹಾನ್‌ನಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಅನ್ನು ಫಿಲಿಪ್ಪೀನ್ಸ್‌ ರಾಜಧಾನಿ ಮನಿಲಾಕ್ಕೆ ಸ್ಥಳಾಂತರ ಮಾಡಲಾಗಿದೆ. ಕೋವಿಡ್‌ 19 ಸೋಂಕಿನ ಭೀತಿಯ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್‌ ಕಾರಣದಿಂದ ವಿಶ್ವದಾದ್ಯಂತ ಹಲವು ಟೂರ್ನಿಗಳು ಒಂದೋ ರದ್ದಾಗಿವೆ, ಮುಂದೂಡಲ್ಪಟ್ವಿವೆ ಅಥವಾ ಸ್ಥಳಾಂತರಗೊಳ್ಳುತ್ತಿವೆ. ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮನಿಲಾದಲ್ಲಿ ಏಪ್ರಿಲ್‌ 21ರಿಂದ 26ರವರೆಗೆ ನಡೆಯಲಿದೆ.

‘ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರು ಹಾಗೂ ಅಧಿಕಾರಿಗಳಿಗೆ ವೀಸಾ ಲಭಿಸುವಂತೆ ಮಾಡಲು ಬ್ಯಾಡ್ಮಿಂಟನ್‌ ಏಷ್ಯಾ (ಬಿಎ) ಫಿಲಿಪ್ಪೀನ್ಸ್ ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಕಾರದೊಂದಿಗೆ ಕೆಲಸ ಮಾಡಲಿದೆ’ ಎಂದು ಬಿಎ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು