ಶುಕ್ರವಾರ, ಏಪ್ರಿಲ್ 23, 2021
22 °C
ರಾಜ್ಯಮಟ್ಟದ ಅಂಧರ ವಾಲಿಬಾಲ್‌ ಟೂರ್ನಿ

ಅಂಧರ ವಾಲಿಬಾಲ್‌: ಪ್ರಶಸ್ತಿ ಗೆದ್ದ ದೀಪಾಂಜಲಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ರಾಜ್ಯಮಟ್ಟದ ಅಂಧರ ವಾಲಿಬಾಲ್‌ ಟೂರ್ನಿಯಲ್ಲಿ ಬೆಂಗಳೂರಿನ ದೀಪಾಂಜಲಿ ತಂಡವು ರಾಣೆಬೆನ್ನೂರಿನ ಸ್ನೇಹದೀಪ ತಂಡವನ್ನು ಭಾನುವಾರ 26–24, 25–19ರಿಂದ ಮಣಿಸಿ ಪ್ರಶಸ್ತಿ ಗೆದ್ದಿತು.

ಪ್ರಶಸ್ತಿ ಗೆದ್ದ ತಂಡಕ್ಕೆ ₹ 7 ಸಾವಿರ ಹಾಗೂ ರನ್ನರ್‌ ಅಪ್‌ ತಂಡಕ್ಕೆ ₹ 5 ಸಾವಿರ ನಗದು ಬಹುಮಾನ ನೀಡಲಾಯಿತು. ಚೆಂಡು ಸಾಗಲು ಮಾತ್ರ ಸ್ಥಳಾವಕಾಶ ಕಲ್ಪಿಸಿ ನೆಟ್‌ ಕಟ್ಟಲಾಗಿತ್ತು. ನೆಲದ ಮೇಲೆ ಉರುಳುತ್ತ ಬರುವ ಚೆಂಡಿನ ಶಬ್ದ ಗ್ರಹಿಸಿ ಆಡಬೇಕು. ಇಬ್ಬರು ಅರೆ ಅಂಧರು ಹಾಗೂ ನಾಲ್ವರು ಪೂರ್ಣ ಅಂಧರು ಅಂಕಣದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು