ಟೋಕಿಯೊ (ಎಎಫ್‌ಪಿ): ಲಾರೆನ್ಸ್ ಪ್ರೈಸ್... ಟ್ಯಾಕ್ಸಿ ಚಾಲಕಿ, ವೇಲ್ಸ್ ತಂಡದ ಫುಟ್‌ಬಾಲ್ ಆಟಗಾರ್ತಿ, ಅಂತರಾಷ್ಟ್ರೀಯ ಯೂತ್ ವಾಲಿಬಾಲ್ ಆಡಿದವರು. ಕಿಕ್‌ಬಾಕ್ಸಿಂಗ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್. ಈ ಪ್ರತಿಭೆಗೆ ಈಗ ಒಲಿಂಪಿಕ್ಸ್ ಬಾಕ್ಸಿಂಗ್ ಚಿನ್ನ ಒಲಿದಿದೆ.

ಭಾನುವಾರ ಇಲ್ಲಿ ನಡೆದ ಮಿಡ್ಲ್‌ವೇಟ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅವರು ಚೀನಾದ ಕಿಯಾನ್ ಲೀ ಅವರನ್ನು 5-0ಯಿಂದ ಪರಾಭವಗೊಳಿಸಿದರು.

ಮಹಿಳೆಯರ ಲೈಟ್ ವೇಟ್ ವಿಭಾಗದ ಚಿನ್ನವು ಐರ್ಲೆಂಡ್‌ನ ಕೆಲ್ಲಿ ಆ್ಯನ್ ಹ್ಯಾರಿಂಗ್ಟನ್ ಅವರ ಪಾಲಾಯಿತು. ಅಂತಿಮ ಸುತ್ತಿನ ಬೌಟ್‌ನಲ್ಲಿ ಅವರು 5-0ಯಿಂದ ಬ್ರೆಜಿಲ್‌ನ ಬಿಟ್ರಿಜ್ ಫೆರಿಯೆರಾ ಅವರನ್ನು ಮಣಿಸಿದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಪುರು ಷರ ಲೈಟ್‌ವೇಟ್ ಫೈನಲ್ ಬೌಟ್‌ನಲ್ಲಿ ಕ್ಯೂಬಾದ ಆ್ಯಂಡಿ ಕ್ರುಜ್ 4-1ರಿಂದ ಅಮೆರಿಕದ ಕೆಯಿಶವಾನ್ ಡೇವಿಡ್ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಪುರುಷರ ಸೂಪರ್ ಹೆವಿವೇಟ್ ವಿಭಾಗದ ಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಬಿ ಜಲೊಲೊವ್ ಅವರು ಅಮೆರಿಕದ ಟೊರೆಜ್ ಜೂನಿಯರ್ ಎದುರು ಗೆದ್ದು ಬೀಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.