ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಬಾಕ್ಸಿಂಗ್ ಕೋಚ್‌ಗೆ ಕೋವಿಡ್

Last Updated 3 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್‌ ಆ್ಯಂಟನ್ ಕಡುಶಿನ್‌ಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.ಲಂಡನ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಪಾಲ್ಗೊಂಡ ತಂಡದೊಂದಿಗೆ ಅವರು ತೆರಳಿದ್ದರು.

ಮಿಡಲ್‌ವೇಟ್ ವಿಭಾಗದಲ್ಲಿ 2019ರ ವಿಶ್ವ ಚಾಂಪಿಯನ್ ಆಗಿದ್ದ ಗ್ಲೆಬ್ ಬಕ್ಷಿಗೆ ತರಬೇತಿ ನೀಡುತ್ತಿರುವ ಕಡುಶಿನ್ ತಮಗೆ ಕೋವಿಡ್ ಇರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ಲಂಡನ್‌ನಿಂದ ಮರಳಿದ ನಂತರ ಮಾರ್ಚ್ 25ರಂದು ವಿಪರೀತ ಜ್ವರ ಕಾಡಿತ್ತು. ಪರೀಕ್ಷೆ ಮಾಡಿಸಿದಾಗ ಕೋವಿಡ್ ಇರುವುದು ಗೊತ್ತಾಗಿದೆ. ಈಗ ಮನೆಯಲ್ಲೇ ಇದ್ದು ಸ್ವಯಂ ಐಸೊಲೇಷನ್‌ಗೆ ಒಳಗಾಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಕಡುಶಿನ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ಆಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಚ್ ಬಿಟ್ಟರೆ ಲಂಡನ್‌ನಿಂದ ಮರಳಿದ ಬಾಕ್ಸರ್‌ಗಳ ಪೈಕಿ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ’ ಎಂದು ರಷ್ಯಾ ಬಾಕ್ಸಿಂಗ್ ಫೆಡರೇಷನ್‌ ಮುಖ್ಯಸ್ಥ ಉಮರ್ ಕ್ರೆಮ್ಲೆವ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದ ಕಾರಣ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಮಾರ್ಚ್ 16ರಂದು ದಿಢೀರ್ ಆಗಿ ರದ್ದುಗೊಳಿಸಲಾಗಿತ್ತು. ಲಂಡನ್‌ನಿಂದ ಮರಳಿದ ಕ್ರೊವೇಷ್ಯಾದ ಮೂವರು ಬಾಕ್ಸರ್‌ಗಳು ಮತ್ತು ಟರ್ಕಿಯ ಇಬ್ಬರು ಬಾಕ್ಸರ್‌ಗಳು ಹಾಗೂ ಕೋಚ್‌ಗೆ ಕೋವಿಡ್ ಇರುವುದು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT