ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನಲ್ಲಿ ಕ್ರೀಡಾ ಪುನರಾರಂಭದ ಕಲರವ

Last Updated 1 ಜೂನ್ 2020, 19:45 IST
ಅಕ್ಷರ ಗಾತ್ರ

ಲಂಡನ್‌: ಇಲ್ಲಿನ ಕೇಂದ್ರ ಬರ್ಮಿಂಗ್‌ಹ್ಯಾಮ್‌ನಲ್ಲಿ‌ ಸೋಮವಾರ ಬೆಳಿಗ್ಗೆ ಖಾಲಿ ಕ್ರೀಡಾಂಗಣದಲ್ಲಿ ಆರಂಭವಾದ‌ ’ಗ್ರೇಹೌಂಡ್‌ ರೇಸ್‘‌ ವಿಶೇಷವಾದ ಗಮನವನ್ನೇನೂ ಸೆಳೆಯಲಿಲ್ಲ.

‘ಪೆರಿ ಬಾರ್‌’ನಲ್ಲಿ ಬಲೆಯಿಂದ ಜಿಗಿದ ಆರು ಶ್ವಾನಗಳು, ಇಂಗ್ಲೆಂಡ್‌ನಲ್ಲಿ 75 ದಿನಗಳ ಬಳಿಕ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಂಡಿದ್ದನ್ನು ಸಾಂಕೇತಿಕವಾಗಿ ಸೂಚಿಸಿದವು. ಕೊರೊನಾ ಉಪಟಳದ ಹಿನ್ನೆಲೆಯಲ್ಲಿ ಕ್ರೀಡೆಗಳು ಎರಡು ತಿಂಗಳಿಗಿಂತ ಹೆಚ್ಚು ಕಾಲ ಸ್ಥಗಿತಗೊಂಡಿದ್ದವು.

ಈ ರೇಸ್‌ನಲ್ಲಿ ‘ಐಆ್ಯಮ್‌ ಸೋಫಿ’ ಹೆಸರಿನ ಶ್ವಾನಗೆಲುವು ಸಾಧಿಸಿತು.

ಸೋಮವಾರ ಆರಂಭವಾದ ಮೂರು ಕ್ರೀಡೆಗಳಲ್ಲಿ ‘ಗ್ರೇಹೌಂಡ್‌ ರೇಸಿಂಗ್‌’ ಮೊದಲನೆಯದ್ದು. ಕುದುರೆ ರೇಸ್‌ ಹಾಗೂ ಸ್ನೂಕರ್‌ ಕೂಡ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆದವು. ಸರ್ಕಾರ ನೀಡಿರುವ ಮಾರ್ಗಸೂಚಿ, ಶಿಸ್ಟಾಚಾರಗಳನ್ನು ಸ್ಪರ್ಧಿಗಳು ಹಾಗೂ ಅಧಿಕಾರಿಗಳು ಪಾಲಿಸಿದರು.

ಕುದುರೆ ರೇಸ್‌ನಲ್ಲಿ ಜಾಕಿಗಳು ಮಾಸ್ಕ್‌ ಧರಿಸಿ ಪಾಲ್ಗೊಳ್ಳಬೇಕಿದೆ. ಸೀಮಿತ ವ್ಯಕ್ತಿಗಳಿಗೆ ಮಾತ್ರ ರೇಸ್‌ಕೋರ್ಸ್‌ನಲ್ಲಿ ಅವಕಾಶವಿದೆ. ಬುಕಿಗಳು, ಬಾಜೀದಾರರು ಹಾಗೂ ಕುದುರೆಗಳ ಮಾಲೀಕರಿಗೂ ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT