ಭಾನುವಾರ, ಜನವರಿ 26, 2020
29 °C

ಅಪಘಾತ: ಮೊಮೊಟಾಗೆ ಗಾಯ, ಚಾಲಕ ದುರ್ಮರಣ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೌಲಾಲಂಪುರ : ವಿಶ್ವದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಸೋಮವಾರ ಸಂಭವಿಸಿದ ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ವ್ಯಾನ್‌ ಚಲಾಯಿಸುತ್ತಿದ್ದ ಚಾಲಕ ಸಾವನ್ನಪ್ಪಿದ್ದಾರೆ. ಮಲೇಷ್ಯಾ ಮಾಸ್ಟರ್ಸ್ ಟೂರ್ನಿ ಗೆದ್ದ ಕೆಲವೇ ತಾಸುಗಳ ಬಳಿಕ ಈ ದುರ್ಘಟನೆ ಸಂಭವಿಸಿದೆ.

‘ಮುಂಜಾವಿನ ವೇಳೆ ಮೊಮೊಟಾ ನಗರದ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುತ್ತಿದ್ದರು. ಅವರಿದ್ದ ವಾಹನವು ನಿಧಾನವಾಗಿ ಚಲಿಸುತ್ತಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಗುದ್ದಿದೆ. ಈ ವೇಳೆ 25 ವರ್ಷದ ಮೊಮೊಟಾ ಅವರಿಗೆ ಮೂಗಿಗೆ ಗಾಯವಾಗಿದ್ದು ಅವರ ಸಹಾಯಕ ಕೋಚ್‌, ಫಿಸಿಯೊಥೆರಪಿಸ್ಟ್‌ ಮತ್ತು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಮೊಮೊಟಾ ಅವರು ಸಿದ್ಧತೆಗಳಿಗೆ ಈ ಘಟನೆಯಿಂದ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ.

ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಭಾನುವಾರ ಮೊಮೊಟಾ ಅವರು ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದರು.

‘ಮುಂಜಾನೆ 4.40ರ ವೇಳೆ ಘಟನೆ ಸಂಭವಿಸಿದೆ. ಅಗ್ನಿಶಾಮಕದಳದ 10 ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದೆವು. ಗಾಯಗೊಂಡವರು ತಾವೇ ವ್ಯಾನ್‌ನಿಂದ ಹೊರಬಂದರು. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು ಕಂಡುಬಂದಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ನೊರಾಜಮ್‌ ಕ್ಯಾಮಿಸ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು