ಬುಧವಾರ, ಜುಲೈ 28, 2021
20 °C

ಟೋಕಿಯೊ ಒಲಿಂಪಿಕ್ಸ್‌ಗೆ ಹಾಕಿ ತಂಡದ ಸಿದ್ಧತೆ ಚೆನ್ನಾಗಿದೆ: ವಿ.ಆರ್‌. ರಘುನಾಥ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡದ ಸಿದ್ಧತೆಯು 2016ರ ರಿಯೊ ಡಿ ಜನೈರೊ ಕೂಟಕ್ಕೆ ಮಾಡಿಕೊಂಡಿದ್ದ ಸಿದ್ಧತೆಗಿಂತ ಉತ್ತಮವಾಗಿದೆ ಎಂದು ಅನುಭವಿ ಡ್ರ್ಯಾಕ್‌ಫ್ಲಿಕ್ಕರ್‌ ವಿ.ಆರ್‌.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ.

ರಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ಎದುರು ಎಡವಿತ್ತು. ಈ ಬಾರಿ ಪ್ರಕಟಿಸಿರುವ ಸಂಭಾವ್ಯ ತಂಡದಲ್ಲಿ ರಘುನಾಥ್ ಅವರ ಹೆಸರಿಲ್ಲ.

‘2016ರಲ್ಲಿ ನಾವು ಕೆನಡಾ ತಂಡದೊಂದಿಗೆ ಡ್ರಾ ಸಾಧಿಸಿದ್ದು, ಮುಳುವಾಯಿತು. ಈ ಪಂದ್ಯದ ಫಲಿತಾಂಶದಿಂದ ನಾವು ಬೇರೊಂದು ಅರ್ಹತಾ ಗುಂಪಿನಲ್ಲಿ ಸ್ಥಾನ ಪಡೆಯಬೇಕಾಯಿತು. ಆದರೆ ಸದ್ಯ ತಂಡದಲ್ಲಿರುವ ಆಟಗಾರರು ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರಬಲ್ಲರು‘ ಎಂದು ಹಾಕಿ ಇಂಡಿಯಾ ನೀಡಿರುವ ಪ್ರಕಟಣೆಯಲ್ಲಿ ರಘುನಾಥ್ ಹೇಳಿದ್ದಾರೆ.

‘ಒಂದೇ ಬ್ಯಾಚ್‌ನ ಆಟಗಾರರು ಏಳೆಂಟು ವರ್ಷಗಳಿಂದ ತಂಡದಲ್ಲಿದ್ದಾರೆ. ಯೂರೋಪಿಯನ್ ಆಟಗಾರರೊಂದಿಗೆ ಅವರು ಸಂಪರ್ಕ ಸಾಧಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದಕ್ಕಿಂತ ಚೆನ್ನಾಗಿ ಟೋಕಿಯೊದಲ್ಲಿ ಆಡಬಲ್ಲರು‘ ಎಂದು ಹಾಕಿ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ರಘುನಾಥ್ ನುಡಿದರು.

‘ಎಲ್ಲ ಆಟಗಾರರು ಒಂದೇ ವಯೋಮಾನದವರು. ಬಹಳ ದಿನಗಳಿಂದ ಒಂದೇ ಕಡೆ ಕ್ವಾರಂಟೈನ್‌ನಲ್ಲಿರುವುದರಿಂದ ಪರಸ್ಪರ ಹೊಂದಾಣಿಕೆ ಇದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು