ಕನ್ನಡಿಗ ಸಂತೋಷ್‌ ‘ರನ್ನರ್‌ ಅಪ್‌’

ಶುಕ್ರವಾರ, ಮೇ 24, 2019
23 °C
ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿ: ಟಿವಿಎಸ್‌ ತಂಡದ ಮೆಟ್ಗೆಗೆ ಪ್ರಶಸ್ತಿ

ಕನ್ನಡಿಗ ಸಂತೋಷ್‌ ‘ರನ್ನರ್‌ ಅಪ್‌’

Published:
Updated:
Prajavani

ಜೈಸಲ್ಮೇರ್‌: ಕರ್ನಾಟಕದ ಸಿ.ಎಸ್‌.ಸಂತೋಷ್‌ ಅವರು ಶನಿವಾರ ಕೊನೆಗೊಂಡ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿಯಲ್ಲಿ ರನ್ನರ್‌ ಅಪ್‌ ಆಗಿದ್ದಾರೆ.

ಮೋಟೊ ವಿಭಾಗದಲ್ಲಿ ಸ್ಪರ್ಧಿಸಿದ್ದ ಹೀರೊ ಮೋಟರ್‌ ಸ್ಪೋರ್ಟ್ಸ್‌ ತಂಡದ ಸಂತೋಷ್‌, ರ‍್ಯಾಲಿ ಪೂರ್ಣಗೊಳಿಸಲು ಒಟ್ಟು 6 ಗಂಟೆ 19 ನಿಮಿಷ 00 ಸೆಕೆಂಡು ತೆಗೆದುಕೊಂಡರು.

ಅಂತಿಮ ದಿನದ ಸ್ಪರ್ಧೆಯಲ್ಲಿ ಸಂತೋಷ್‌ ಅಮೋಘ ಚಾಲನಾ ಕೌಶಲ ಮೆರೆದರು. ಹೀಗಿದ್ದರೂ ಪ್ರಶಸ್ತಿ ಗೆಲ್ಲಲು ಆಗಲಿಲ್ಲ.

ಟಿವಿಎಸ್‌ ರೇಸಿಂಗ್‌ ತಂಡದ ಆ್ಯಡ್ರಿಯನ್ ಮೆಟ್ಗೆ ಈ ವಿಭಾಗದ ಪ್ರಶಸ್ತಿ ಜಯಿಸಿದರು. ಅವರು ಒಟ್ಟು 6 ಗಂಟೆ 13 ನಿಮಿಷ 25 ಸೆಕೆಂಡುಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

ಟಿವಿಎಸ್‌ ರೇಸಿಂಗ್ ತಂಡವನ್ನು ಪ್ರತಿನಿಧಿಸಿದ್ದ ಮೈಸೂರಿನ ಅಬ್ದುಲ್‌ ವಾಹೀದ್‌ ತನ್ವೀರ್‌ ಮೂರನೇಯವರಾಗಿ (ಒಟ್ಟು 6 ಗಂಟೆ 35 ನಿಮಿಷ 28 ಸೆಕೆಂಡು) ರ‍್ಯಾಲಿ ಮುಗಿಸಿದರು. ನೆಲಮಂಗಲದ ಆರ್‌.ನಟರಾಜ್ ಕೂಡಾ ಉತ್ತಮ ಸಾಮರ್ಥ್ಯ ತೋರಿದರು. ನಟರಾಜ್‌ ಕೂಡಾ ಟಿವಿಎಸ್‌ ತಂಡದ ಸವಾಲು ಎತ್ತಿ ಹಿಡಿದಿದ್ದರು.

ಟಿವಿಎಸ್‌ ರೇಸಿಂಗ್‌, ಮೋಟೊ ವಿಭಾಗದ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಎಕ್ಸ್‌ಟ್ರೀಮ್‌ ವಿಭಾಗದ ಪ್ರಶಸ್ತಿ ಅಭಿಷೇಕ್‌ ಮಿಶ್ರಾ ಮತ್ತು ಶ್ರೀಕಾಂತ್ ಗೌಡ ಅವರ ಪಾಲಾಯಿತು. ಅಭಿಷೇಕ್‌ ಮತ್ತು ಶ್ರೀಕಾಂತ್‌ ಅವರು ಸ್ಪಾರ್ಕಿ ಗ್ಯಾರೆಜ್‌ ತಂಡವನ್ನು ಪ್ರತಿನಿಧಿಸಿದ್ದರು.

ಎಂಡ್ಯೂರ್‌ ವಿಭಾಗದಲ್ಲಿ ಅಂಕುರ್‌ ಚೌಹಾಣ್‌ ಮತ್ತು ಎಂ.ಪ್ರಕಾಶ್‌ ಅವರು ಚಾಂಪಿಯನ್‌ ಆದರು. ಐದು ಲೆಗ್‌ಗಳಲ್ಲೂ ಈ ಜೋಡಿ ಮಿಂಚಿನ ಗತಿಯಲ್ಲಿ ಮೋಟರ್‌ ಕಾರು ಓಡಿಸಿ ಗಮನ ಸೆಳೆಯಿತು.

ಖ್ಯಾತಿ ಮೂಡಿ (ಎಕ್ಸ್‌ಟ್ರೀಮ್‌), ಐಶ್ವರ್ಯ ಪಿಸ್ಸೆ (ಮೋಟೊ) ಮತ್ತು ಅಭಿಲಾಷ ಸಿಂಗ್‌ (ಎಂಡ್ಯೂರ್‌) ಅವರು ಉತ್ತಮ ಚಾಲಕಿ ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !