ಶುಕ್ರವಾರ, ಏಪ್ರಿಲ್ 10, 2020
19 °C

ನವೆಂಬರ್‌ 8ರಿಂದ ಗಾಲ್ಫ್‌ ಲೀಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಗಾಲ್ಫ್‌ ಸಂಸ್ಥೆ ಆಶ್ರಯದ ಚೊಚ್ಚಲ ಕೆಜಿಎ ಪ್ರೀಮಿಯರ್‌ ಲೀಗ್‌ಗೆ ನವೆಂಬರ್‌ 8ರಂದು ಚಾಲನೆ ಸಿಗಲಿದೆ.

ಲೀಗ್‌ನಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿದ್ದು, ದಕ್ಷಿಣ ಭಾರತದ 360 ಗಾಲ್ಫರ್‌ಗಳು ಕಣಕ್ಕಿಳಿಯಲಿದ್ದಾರೆ.

ಒಟ್ಟು 500 ಮಂದಿ ಹರಾಜಿಗೆ ಲಭ್ಯರಿದ್ದು, ಪ್ರತಿ ತಂಡಗಳು ತಲಾ 18 ಮಂದಿಯನ್ನು (0–13, 14–18, 19 ಮತ್ತು ಅದಕ್ಕಿಂತ ಮೇಲ್ಪಟ್ಟ ಹ್ಯಾಂಡಿಕ್ಯಾಪ್‌ ವಿಭಾಗಗಳು ಸೇರಿ) ಸೆಳೆದುಕೊಳ್ಳಬಹುದಾಗಿದೆ.

ನವೆಂಬರ್‌ 8 ಮತ್ತು 9 (ಮೊದಲ ಸುತ್ತು), ನವೆಂಬರ್‌ 22 ಮತ್ತು 23 (ಎರಡನೇ ಸುತ್ತು) ಹಾಗೂ ಡಿಸೆಂಬರ್‌ 6 ಮತ್ತು 7 (ಮೂರನೇ ಸುತ್ತು) ರಂದು ಸ್ಪರ್ಧೆಗಳು ನಡೆಯಲಿವೆ. ಅಗ್ರ ಎಂಟು ತಂಡಗಳು ಡಿಸೆಂಬರ್‌ 21ರಂದು ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗೆ ಅರ್ಹತೆ ಗಳಿಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು