ಭಾನುವಾರ, ಮಾರ್ಚ್ 26, 2023
23 °C
ಇಂದಿನಿಂದ ಬೆಂಗಳೂರಿನಲ್ಲಿ ಮಹಿಳಾ ಹಾಕಿ ಶಿಬಿರ: 25 ಮಂದಿ ಆಯ್ಕೆ

ಬೆಂಗಳೂರಿನಲ್ಲಿ ಮಹಿಳಾ ಹಾಕಿ ಶಿಬಿರ: ಭಾರತ ತಂಡದಲ್ಲಿ ಲಿಲಿಮಾ ಮಿನ್ಜ್‌, ರಶ್ಮಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ರಾಷ್ಟ್ರೀಯ ಶಿಬಿರವು ಸೋಮವಾರ ಇಲ್ಲಿ ಆರಂಭವಾಗಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ತಂಡದ ಸದಸ್ಯರು ಸೇರಿದಂತೆ 25 ಮಂದಿಯನ್ನು ಹಾಕಿ ಇಂಡಿಯಾ ಶಿಬಿರಕ್ಕೆ ಆಯ್ಕೆ ಮಾಡಿದೆ.

‘ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಆವರಣದಲ್ಲಿ ರಾಷ್ಟ್ರೀಯ ಶಿಬಿರವು ಅಕ್ಟೋಬರ್‌ 20ರವರೆಗೆ ನಡೆಯಲಿದೆ‘ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

25 ಮಂದಿಯ ತಂಡದಲ್ಲಿ ಗಗನದೀಪ್‌ ಕೌರ್‌, ಮರಿಯಾನಾ ಕುಜುರ್‌, ಸುಮನ್ ದೇವಿ ತೌಡಮ್‌ ಮತ್ತು ಚೌಧರಿ ಇದ್ದು, ಇವರು ಜೂನಿಯರ್ ಹಂತದಿಂದ ಇವರು ಸೀನಿಯರ್‌ ತಂಡಕ್ಕೆ ಬಡ್ತಿ ಪಡೆದಿದ್ದಾರೆ.

ಅನುಭವಿ ಆಟಗಾರ್ತಿ ಲಿಲಿಮಾ ಮಿನ್ಜ್‌, ರಶ್ಮಿತಾ ಮಿನ್ಜ್‌, ಜ್ಯೋತಿ, ರಾಜ್ವಿಂದರ್ ಕೌರ್‌ ಮತ್ತು ಮನ್‌ಪ್ರೀತ್ ಕೌರ್‌ ಕೂಡ ಸ್ಥಾನ ಗಿಟ್ಟಿಸಿದ್ದಾರೆ

ಒಲಿಂಪಿಕ್ಸ್ ತಂಡದಲ್ಲಿದ್ದ ಸಲೀಮಾ ಟೆಟೆ, ಲಾಲ್‌ರೆಮ್ಸಿಯಾಮಿ, ಶರ್ಮಿಳಾ ಅವರು ಸಾಯ್‌ ಆವರಣದಲ್ಲೇ ನಡೆಯುತ್ತಿರುವ ಭಾರತ ಜೂನಿಯರ್‌ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನಿಯರ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದೆ. 

‘ಟೋಕಿಯೊದಲ್ಲಿ ಸ್ವಲ್ಪ‍ ಅಂತರದಲ್ಲೇ ಪದಕ ಕೈ ತಪ್ಪಿದ್ದು ಆಟಗಾರ್ತಿಯರ ನಿರಾಸೆಗೆ ಕಾರಣವಾಗಿತ್ತು. ಆದರೆ ಕಳೆದ ಕೆಲವು ವಾರಗಳಲ್ಲಿ ಅವರು ಪಡೆದ ಬೆಂಬಲ ಅದ್ಭುತವಾದದ್ದು. ಇದು ಅವರನ್ನು ಹೆಚ್ಚಿನ ಸಾಮರ್ಥ್ಯ ತೋರಲು ಪ್ರೇರೇಪಿಸಿದೆ‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೆಂದ್ರೊ ನಿಂಗೊಂಬಮ್ ಹೇಳಿದ್ದಾರೆ.

ಶಿಬಿರಕ್ಕೆ ಆಯ್ಕೆಯಾದ ತಂಡ: ಸವಿತಾ, ರಜನಿ ಎತಿಮರ್ಪು, ದೀಪ್ ಗ್ರೇಸ್ ಎಕ್ಕಾ, ರೀನಾ ಖೋಖರ್, ಮನ್‌ಪ್ರೀತ್‌ ಕೌರ್, ಗುರ್ಜಿತ್ ಕೌರ್, ನಿಶಾ, ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ, ಲಿಲಿಮಾ ಮಿನ್ಜ್‌, ಸುಶೀಲಾ ಚಾನು ಪುಕ್ರಂಬಮ್‌, ನಮಿತಾ ಟೊಪ್ಪೊ, ರಾಣಿ, ವಂದನಾ ಕಟಾರಿಯಾ, ನವಜೋತ್ ಕೌರ್, ನವನೀತ್ ಕೌರ್,  ರಾಜ್ವಿಂದರ್‌ ಕೌರ್‌, ಉದಿತಾ, ರಶ್ಮಿತಾ ಮಿನ್ಜ್‌, ಜ್ಯೋತಿ, ಗಗನದೀಪ್ ಕೌರ್, ಮರಿಯಾನಾ ಕುಜೂರ್, ಸುಮನ್ ದೇವಿ ತೌಡಮ್, ಮಹಿಮಾ ಚೌಧರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು