ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌

ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಡಬ್ಲ್ಯುಎಫ್‌
Last Updated 22 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಈ ವರ್ಷದ ಡಿಸೆಂಬರ್‌ 8 ರಿಂದ 13ರವರೆಗೆ ನಡೆಯಲಿದೆ. ಕೊರೊನಾ ವೈರಸ್‌ ಎಬ್ಬಿಸಿದ ಕೋಲಾಹಲದಿಂದ ಈ ವರ್ಷದ ಟೂರ್ನಿಗಳು ಅಸ್ತವ್ಯಸ್ತಗೊಂಡಿದ್ದು, ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಪರಿಷ್ಕೃತ ಕ್ಯಾಲೆಂಡರ್‌ ಪ್ರಕಟಿಸಿದೆ.

ವಿಶ್ವ ಟೂರ್‌ ಸೂಪರ್‌ 500 ಮಾನ್ಯತೆಯ ಇಂಡಿಯಾ ಓಪನ್‌ ಟೂರ್ನಿ, ಪೂರ್ವನಿಗದಿಯಂತೆ ನವದೆಹಲಿಯಲ್ಲಿ ಮಾರ್ಚ್‌ 24 ರಿಂದ 29 ರವರೆಗೆ ನಡೆಯಬೇಕಾಗಿತ್ತು.

ಈ ಮಹತ್ವದ ಟೂರ್ನಿಗೆ ಮೊದಲು ಹೈದರಾಬಾದ್‌ ಓಪನ್‌ (ಆಗಸ್ಟ್‌ 11 ರಿಂದ 16) ಮತ್ತು ಸೈಯ್ಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿ (ನವೆಂಬರ್‌ 17 ರಿಂದ 22) ನಡೆಯಲಿವೆ ಎಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ತಿಳಿಸಿದೆ.

ಕೊರೊನಾ ಸೋಂಕು ಹಬ್ಬಿದ ಕಾರಣ ಎಂಟು ಟೂರ್ನಿಗಳ ದಿನಾಂಕಗಳನ್ನು ಬದಲಿಸಲಾಗಿದೆ. ನ್ಯೂಜಿಲೆಂಡ್‌ ಓಪನ್‌, ಇಂಡೊನೇಷ್ಯಾ ಓಪನ್‌, ಥಾಯ್ಲೆಂಡ್‌ ಓಪನ್‌ ಮತ್ತು ಚೀನಾದಲ್ಲಿ ನಿಗದಿಯಾದ ವಿಶ್ವ ಟೂರ್‌ ಫೈನಲ್ಸ್‌ ಇವುಗಳು ಈ ಎಂಟು ಟೂರ್ನಿಗಳಲ್ಲಿ ಒಳಗೊಂಡಿವೆ.

ಬ್ಯಾಡ್ಮಿಂಟನ್‌ ಪುನರಾಗಮನಕ್ಕೆ ಯೋಜನೆ ರೂಪಿಸುವುದು ಕಷ್ಟದ ಕೆಲಸವಾಯಿತು ಎಂದು ಬಿಡಬ್ಲ್ಯುಎಫ್‌ ಮಹಾಪ್ರಧಾನ ಕಾರ್ಯದರ್ಶಿ ಥಾಮಸ್‌ ಲಂಡ್‌ ತಿಳಿಸಿದ್ದಾರೆ.

‘ಯಾವಾಗ ಅಂತರರಾಷ್ಟ್ರೀಯ ಸಂಚಾರ, ಪ್ರಯಾಣ ನಿರ್ಬಂಧ ತೆಗೆದುಹಾಕಲಾಗುವುದು ಎಂದು ಪ್ರಸ್ತುತ ಸನ್ನಿವೇಶದಲ್ಲಿ ಊಹಿಸುವುದು ಕಷ್ಟ. ಸುರಕ್ಷಿತ ಎಂದು ಮನವರಿಕೆಯಾಗುವವರೆಗೆ ನಾವು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ ಪುನರಾರಂಭಿಸುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT