ಶುಕ್ರವಾರ, ಏಪ್ರಿಲ್ 23, 2021
27 °C
ಎಂಟು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಆಹ್ವಾನಿತ ಟೂರ್ನಿ: ಅಸ್ಟ್ರಿಯಾ ಪರಾಭವ

ಸಂಜಯ್‌ ಸಾಹಸ: ಭಾರತ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

ಮ್ಯಾಡ್ರಿಡ್‌: ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ಸಂಜಯ್‌, ಭಾರತದ ಕಿರಿಯರ ಹಾಕಿ ತಂಡಕ್ಕೆ 4–2ರ ಜಯ ತಂದುಕೊಟ್ಟರು. ಭಾರತ, ಎಂಟು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಆಹ್ವಾನಿತ ಟೂರ್ನಿಯಲ್ಲಿ ಅಸ್ಟ್ರಿಯಾ ತಂಡವನ್ನು ಮಣಿಸಿತು.

ಪ್ರಥಮ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಒದಗಿತು. ಸಂಜಯ್‌ ಭಾರತದ ಮುನ್ನಡೆಗೆ ಕಾರಣವಾದರು.

23ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕವೇ ಮತ್ತೊಂದು ಗೋಲು ದಾಖಲಿಸಿದ ಸಂಜಯ್‌ ಮುನ್ನಡೆ ಹೆಚ್ಚಿಸಿದರು. ಒಲಿವರ್‌ ಕೆರ್ನ್‌ 34ನೇ ನಿಮಿಷದಲ್ಲಿ ಅಸ್ಟ್ರಿಯಾ ತಂಡದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದೊಳಗೆ ರಾಹುಲ್‌ ರಾಜ್‌ಭರ್‌ ಗೋಲು ದಾಖಲಿಸಿ ಭಾರತದ 3–1ರ ಮುನ್ನಡೆಗೆ ಕಾರಣವಾದರು.

49ನೇ ನಿಮಿಷದಲ್ಲಿ ತಂಡದ ಫಿಲಿಪ್‌ ಶಿಪ್ಪನ್‌ ಯಶಸ್ವಿಯಾದರು. ತಿರುಗೇಟು ನೀಡಿದ ಭಾರತದ ಪ್ರಭ್‌ಜೋತ್‌ ಸಿಂಗ್‌ 51ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯದ ಮಹಲು ಕಟ್ಟಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು