ಭಾನುವಾರ, ಫೆಬ್ರವರಿ 28, 2021
20 °C

ಹಾಕಿ: ಭಾರತ ಮಹಿಳಾ ಜೂನಿಯರ್ ತಂಡಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಟಿಯಾಗೊ, ಚಿಲಿ: ಪಂದ್ಯದ ಕೊನೆಯ ಒಂಬತ್ತು ನಿಮಿಷಗಳಲ್ಲಿ ಮೂರು ಗೋಲು ದಾಖಲಿಸಿದ ಭಾರತ ಜೂನಿಯರ್‌ ಮಹಿಳಾ ತಂಡವು 4–2ರಿಂದ ಚಿಲಿ ಜೂನಿಯರ್‌ ತಂಡವನ್ನು ಸೋಲಿಸಿತು. ಇಲ್ಲಿಯ ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಕಿರಿಯರು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಜಯದ ಸಿಹಿ ಸವಿದರು.

ಭಾರತ ತಂಡದ ಪರ ಗಗನದೀಪ್ ಕೌರ್‌ (51, 59ನೇ ನಿಮಿಷ) ಕೈಚಳಕ ತೋರಿದರು. ಫಾರ್ವರ್ಡ್‌ ಆಟಗಾರ್ತಿಯರಾದ ಮುಮ್ತಾಜ್ ಖಾನ್‌ (21ನೇ ನಿಮಿಷ) ಹಾಗೂ ಸಂಗೀತಾ ಕುಮಾರಿ (53ನೇ ನಿಮಿಷ) ಗೋಲು ದಾಖಲಿಸಿದರು. ಚಿಲಿ ವಿರುದ್ಧ ಭಾರತಕ್ಕೆ ಇದು ಎರಡನೇ ಜಯ.

ಆತಿಥೇಯ ತಂಡದ ಅಮಂದಾ ಮಾರ್ಟಿನೆಜ್‌ (4ನೇ ನಿ.) ಹಾಗೂ ಡೊಮಿಂಗಾ ಲ್ಯೂಡರ್ಸ್ (41ನೇ ನಿ.) ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು