ನವದೆಹಲಿ: ಇಟಾಲಿಯನ್ ಸ್ಟೈಲ್ ತಂಡದವರು ವಿಶ್ವದ ಪ್ರಥಮ ಆನ್‌ಲೈನ್ ಶೂಟಿಂಗ್ ಲೀಗ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಇಟಾಲಿಯನ್ ಸ್ಟೈಲ್ 10–8 ಪಾಯಿಂಟ್ಸ್‌ನಿಂದ ಆಸ್ಟ್ರಿಯನ್ ರಾಕ್ಸ್ ತಂಡವನ್ನು ಸೋಲಿಸಿತು.

10 ಮೀಟರ್ಸ್ ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಇಟಾಲಿಯನ್ ತಂಡದ ಮಾರ್ಕೊ ಸುಪ್ಪಿನಿ ಉತ್ತಮ ಸಾಮರ್ಥ್ಯ ತೋರಿದರು.

ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಸುಪ್ಪಿನಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ.

20 ಶಾಟ್‌ಗಳ ನಿರ್ಣಾಯಕ ಹಣಾಹಣಿಯಲ್ಲಿ ಸುಪ್ಪಿನಿ ಅವರು ತಲಾ ಎರಡು ಬಾರಿ 10.9 ಮತ್ತು 10.8 ಪಾಯಿಂಟ್ಸ್‌ಗಳಿಗೆ ಗುರಿ ಇಟ್ಟರು.

ಇಟಾಲಿಯನ್ ತಂಡದಲ್ಲಿದ್ದ ಮತ್ತೊಬ್ಬ ಶೂಟರ್, 25 ವರ್ಷ ವಯಸ್ಸಿನ ಲೊರೆಂಜೊ ಬಾಕ್ಸಿ ಅವರೂ ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.