ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್ ವಿಶ್ವ ಆರ್ಚರಿ: ಫೈನಲ್‌ಗೆ ಕೋಮಲಿಕಾ

Last Updated 12 ಆಗಸ್ಟ್ 2021, 16:10 IST
ಅಕ್ಷರ ಗಾತ್ರ

ರಾಕ್ಸಾಫ್‌, ಪೊಲೆಂಡ್ (ಪಿಟಿಐ): ಭಾರತದ ಕೋಮಲಿಕಾ ಬಾರಿ ಇಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಆರ್ಚರಿ 21 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

18 ವರ್ಷದೊಳಗಿನವರ ರಿಕರ್ವ್‌ ವಿಶ್ವ ಚಾಂಪಿಯನ್‌ ಆಗಿರುವ ಕೊಮಲಿಕಾ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 6–4(28-27, 25-28, 28-26, 25-30, 29-25) ರಿಂದ ಅಮೆರಿಕದ ಕ್ಯಾಸಿ ಕೌಫೋಲ್ಡ್ ಸವಾಲು ಮೀರಿ ನಿಂತರು.

ಆರನೇ ಶ್ರೇಯಾಂಕದ ಕೋಮಲಿಕಾ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ದೇಶದ ನಾಲ್ಕನೇ ಶ್ರೇಯಾಂಕದ ಎಲಿಯಾ ಕ್ಯಾನಾಲೆಸ್ ಅವರನ್ನು ಎದುರಿಸುವರು. ಒಂದೊಮ್ಮೆ ಇಲ್ಲಿ ಅವರು ಪದಕ ಜಯಿಸಿದರೆ, ದೀಪಿಕಾ ಕುಮಾರಿ ಅವರ ದಾಖಲೆಯನ್ನು ಸರಿಗಟ್ಟುವರು.

2009 ರಿಂದ 2011ರ ಅವಧಿಯಲ್ಲಿ ದೀಪಿಕಾ ಜೂನಿಯರ್ ಮತ್ತು ಕೆಡೆಟ್ ವಿಬಾಗಗಳಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಈ ಸಾಧನೆ ಮಾಡಿದ ಭಾರತದ ಏಕೈಕ ಮಹಿಳಾ ಆರ್ಚರ್ ಅವರಾಗಿದ್ದಾರೆ.

‘ಫೈನಲ್‌ನಲ್ಲಿ ನನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತೇನೆ. ನನ್ನ ಪದಕ ಸಂಗ್ರಹಕ್ಕೆ ಮತ್ತೊಂದು ಚಿನ್ನವನ್ನು ಸೇರಿಸುತ್ತೇನೆ’ ಎಂದು ಜೆಮ್‌ಷೆಡ್‌ಪುರದ ಕೋಮಲಿಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೈನಲ್‌ಗೆ ಸಾಕ್ಷಿ: ಜೂನಿಯರ್ ಬಾಲಕಿಯರ ವಿಭಾಗದ ಕೌಂಪೌಡ್ ವಿಭಾಗದ ಫೈನಲ್‌ಗೆ ಸಾಕ್ಷಿ ಚೌಧರಿ ಪ್ರವೇಶಿಸಿದ್ದಾರೆ.

ಸಾಕ್ಷಿ 144–142 ರಿಂದ ಅಮೆರಿಕದ ಅನಾ ಸ್ಕಾರ್‌ಬರೊ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದರು. ಅವರು ಫೈನಲ್‌ನಲ್ಲಿ ಕ್ರೊವೆಷ್ಯಾದ ಅಮಂದಾ ಮ್ಲಿನಾರಿಚ್ ಅವರನ್ನು ಎದುರಿಸುವರು.

ಬಾಲಕರ ವಿಭಾಗದಲ್ಲಿ ರಿಷಭ್ ಯಾದವ್ ಕೂಡ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿರುವರು.

ವೈಯಕ್ತಿಕ ವಿಭಾಗದ ಸೆಮಿಫೈನಲ್‌ನಲ್ಲಿ ರಿಷಭ್ 146–147 ರಿಂದ ಇಸ್ತೊನಿಯಾದ ರಾಬಿನ್ ಜಾಮ್ತಾ ಎದುರು ಸೋತರು. ಅವರು ಕಂಚಿನ ಪದಕದ ಸುತ್ತಿನಲ್ಲಿ ಮೆಕ್ಸಿಕೊದ ಸೆಬಾಸ್ಟಿಯನ್ ಗಾರ್ಸಿಯಾ ವಿರುದ್ಧ ಸ್ಪರ್ಧಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT