ಸೋಮವಾರ, ಸೆಪ್ಟೆಂಬರ್ 20, 2021
20 °C

ಕೆಎಸ್‌ಪಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೋಜ್‌ (19 ಪಾಯಿಂಟ್ಸ್) ಹಾಗೂ ಸುಭಾಷ್‌ (17 ಪಾಯಿಂಟ್ಸ್) ಅವರ ಅಮೋಘ ಆಟವು ಕೆಎಸ್‌ಪಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಎಂ.ಸಿ.ಶ್ರೀನಿವಾಸ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಬಿ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ತಂಡವು 95–48ರಿಂದ ಬಾಶ್ ತಂಡವನ್ನು ಮಣಿಸಿತು.

ಬಾಶ್ ತಂಡದ ಪರ ವಿಜಯ್‌ (24 ಪಾಯಿಂಟ್ಸ್) ಮಿಂಚಿದರು. 

ಕೋರಮಂಗಲ ಎಸ್‌ಸಿ ತಂಡವು 87–31ರಿಂದ ರೋವರ್ಸ್‌ ಧಾರವಾಡ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ರವೀಶ್ ಮತ್ತು ಕರಣ್ ತಲಾ 14 ಪಾಯಿಂಟ್ಸ್ ಕಲೆಹಾಕಿದರು.

ಇನ್ನೊಂದು ಪಂದ್ಯದಲ್ಲಿ ಎಂ.ಎನ್‌.ಕೆ. ರಾವ್‌ ಪಾರ್ಕ್‌ ಬಿಸಿ ತಂಡವು 70–53ರಿಂದ ಕನಕ ಕೋಲಾರ ಎದುರು ಜಯ ಸಾಧಿಸಿತು. ವಿಜೇತ ತಂಡದ ಪ್ರಜ್ಞೇಶ್‌ 23 ಮತ್ತು ಪ್ರಶಾಂತ್ 10 ಪಾಯಿಂಟ್ಸ್ ಕಲೆಹಾಕಿದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ 77–37ರಿಂದ ಪ್ರೊಟೆಕ್‌ ಅಸೋಸಿಯೇಷನ್ ಮೈಸೂರು ತಂಡ ವನ್ನು ಸೋಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು