ಒಡೆನ್ಸ್, ಡೆನ್ಮಾರ್ಕ್ : ಭಾರತದ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 21–9, 21–15ರಿಂದ ಕ್ರಿಸ್ಟೊ ಪಾಪೊವ್ ಎದುರು ಗೆದ್ದರು.

ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಏಳು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳು ಡೆನ್ಮಾರ್ಕ್ ಓಪನ್ ಮೂಲಕ ಪುನರಾರಂಭಗೊಂಡಿವೆ.

ಎರಡು ಸೂಪರ್ 100 ಸೇರಿದಂತೆ ಇದುವರೆಗೆ ಐದು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿರುವ 19 ವರ್ಷದ ಲಕ್ಷ್ಯ, ಫ್ರಾನ್ಸ್‌ನ ಪಾಪೊವ್ ವಿರುದ್ಧ ಪಾರಮ್ಯ ಮೆರೆದರು.

ಮುಂದಿನ ಪಂದ್ಯದಲ್ಲಿ ಲಕ್ಷ್ಯ, ಡೆನ್ಮಾರ್ಕ್‌ನ ಹಾನ್ಸ್–ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್ ಹಾಗೂ ಬೆಲ್ಜಿಯಂನ ಮ್ಯಾಕ್ಸಿಮ್ ಮೂರಿಲ್ಸ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

‘ಏಳು ತಿಂಗಳ ಬಳಿಕ ಕಣಕ್ಕಿಳಿಯುತ್ತಿರುವುದು ಸಂತಸ ತಂದಿದೆ. ಅಂಗಣದಲ್ಲಿ ಸಹಜ ಆಟ ಆಡಿದೆ‘ ಎಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿರುವ ಲಕ್ಷ್ಯ ಹೇಳಿದ್ದಾಗಿ, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಉಲ್ಲೇಖಿಸಿದೆ.

ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ 11–8ರ ಮುನ್ನಡೆ ಗಳಿಸಿದ್ದ ಲಕ್ಷ್ಯ ಅವರು ಎದುರಾಳಿ ಚೇತರಿಸಿಕೊಳ್ಳಲು ಅವಕಾಶವನ್ನೇ ಕೊಡಲಿಲ್ಲ. ಮತ್ತೆ ಮೂರು ಪಾಯಿಂಟ್ಸ್‌ನೊಂದಿಗೆ 14–8ಕ್ಕೆ ಮುನ್ನಡೆದ ಅವರು, 21–9ರಿಂದ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಮಾತ್ರ ಪಾಪೊವ್ ಸ್ವಲ್ಪ ಪ್ರತಿರೋಧ ಒಡ್ಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.