ಗುರುವಾರ , ಅಕ್ಟೋಬರ್ 6, 2022
23 °C

ಲಾಂಗ್‌ಜಂಪ್‌: ಜೆಸ್ವಿನ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಲಾಂಗ್‌ಜಂಪ್‌ ಸ್ಪರ್ಧಿ ಜೆಸ್ವಿನ್‌ ಆಲ್ಡ್ರಿನ್‌ ಅವರು ಲಿಕ್‌ಟೆನ್‌ಸ್ಟೈನ್‌ನಲ್ಲಿ ನಡೆದ ಮೂರನೇ ಗೋಲ್ಡನ್‌ ಫ್ರೈ ಸೀರಿಸ್‌ ಅಥ್ಲೆಟಿಕ್‌ ಕೂಟದಲ್ಲಿ ಚಿನ್ನ ಗೆದ್ದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವರು 8.12 ಮೀ. ದೂರ ಜಿಗಿದರು. ಭಾರತದ ಅಥ್ಲೀಟ್‌ ವಿದೇಶದಲ್ಲಿ ನಡೆದ ಕೂಟದಲ್ಲಿ 8 ಮೀ.ಗಿಂತ ಹೆಚ್ಚಿನ ಸಾಧನೆ ಮಾಡಿದ್ದು ಇದೇ ಮೊದಲು. ಈ ಹಿಂದೆ ಐದು ಕೂಟಗಳಲ್ಲಿ ಪಾಲ್ಗೊಂಡಿದ್ದರೂ 8 ಮೀ. ಗಡಿ ತಲುಪಿರಲಿಲ್ಲ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 8.26 ಮೀ. ಆಗಿದೆ.

ಜೆಕ್‌ರಿಪಬ್ಲಿಕ್‌ನ ರಾಡೆಕ್‌ ಜಸ್ಕಾ (7.70 ಮೀ.) ಬೆಳ್ಳಿ ಹಾಗೂ ನಾರ್ವೆಯ ಹೆನ್ರಿಕ್‌ ಫ್ಲಾಟ್ನೆಸ್ (7.66 ಮೀ.) ಕಂಚು ಗೆದ್ದುಕೊಂಡರು.

ಟ್ರಿಪಲ್‌  ಜಂಪ್‌ ಸ್ಪರ್ಧಿ ಪ್ರವೀಣ್‌ ಚಿತ್ರವೇಲ್‌ ಅವರು ಇಲ್ಲಿ ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸಿ 7.58 ಮೀ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು