ಸೋಮವಾರ, ಜುಲೈ 4, 2022
24 °C

ಬಾಕ್ಸಿಂಗ್: ರಾಷ್ಟ್ರೀಯ ಶಿಬಿರಕ್ಕೆ ಮೇರಿ, ಪಂಘಾಲ್ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಮತ್ತು ಏಷ್ಯನ್ ಗೇಮ್ಸ್‌ ಚಿನ್ನದ ಪದಕ ವಿಜೇತ ಅಮಿತ್ ಪಂಘಾಲ್ ಅವರನ್ನು ರಾಷ್ಟ್ರೀಯ ಬಾಕ್ಸಿಂಗ್ ಶಿಬಿರಕ್ಕೆ ಆಯ್ಕೆ ಮಾಡಿಲ್ಲ. 

ಇದೇ 11 ರಿಂದ ಹದಿಮೂರು ದಿನಗಳ ಶಿಬಿರವು ನಡೆಯಲಿದೆ.  ಪುರುಷರ ಶಿಬಿರದಲ್ಲಿ 52 ಬಾಕ್ಸರ್‌ಗಳು ಭಾಗವಹಿಸುರು. ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್)ಯಲ್ಲಿ ಶಿಬಿರ ನಡೆಯುವುದು.

ಆದರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಮನೀಷ್ ಕೌಶಿಕ್, ಆಶಿಶ್ ಚೌಧರಿ, ವಿಕಾಶ್ ಕೃಷ್ಣನ್ ಮತ್ತು ಸತೀಶ್ ಕುಮಾರ್ ಕೂಡ ಶಿಬಿರಕ್ಕೆ ಆಯ್ಕೆಯಾಗಿಲ್ಲ. ವಿಕಾಸ್ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. 

ಮಹಿಳೆಯರ ಶಿಬಿರವು ಹರಿಯಾಣದ ರೋಹತಕ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯಲಿದೆ. 49 ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತರಾದ ಲವ್ಲಿನಾ ಬೊರ್ಗೊಹೈನ್ (70ಕೆಜಿ), ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಝರೀನ್ (52ಕೆಜಿ) ಮತ್ತು ಏಷ್ಯನ್ ಚಾಂಪಿಯನ್ ಪೂಜಾರಾಣಿ (81ಕೆಜಿ) ಶಿಬಿರದಲ್ಲಿದ್ದಾರೆ.

ಯೂತ್ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಮೇರಿ ಕೋಮ್ ಅವರನ್ನು ಆಯ್ಕೆ ಮಾಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಕೋಮ್, ‘ಸದ್ಯ ನಾನು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದೇನೆ. ನಮ್ಮ ತಂಡದೊಂದಿಗೆ ಜನವರಿಯಲ್ಲಿ ಕಠಿಣ ಅಭ್ಯಾಸ ಮಾಡುತ್ತೇನೆ. ಮುಂದಿನ ವರ್ಷದ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುವೆ‘ ಎಂದಿದ್ದಾರೆ.

38 ವರ್ಷದ ಮೇರಿ ಕೋಮ್ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು