ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್ ಥ್ರೋದಲ್ಲಿ 100 ಮೀಟರ್‌ ದಾಟಿದ ವಿಶ್ವದ ಏಕೈಕ ಅಥ್ಲೀಟ್ ಯಾರು ಗೊತ್ತೇ?

Last Updated 9 ಆಗಸ್ಟ್ 2021, 8:25 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ 'ಟ್ರ್ಯಾಕ್ ಆ್ಯಂಡ್ ಫೀಲ್ಡ್‌'ನಲ್ಲಿ ಭಾರತಕ್ಕೆ ದೊರಕಿದ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ.

ನೀರಜ್ ಯಶಸ್ಸಿನಲ್ಲಿ ತರಬೇತುದಾರರ ಪಾತ್ರವೂ ಮಹತ್ತರವಾಗಿದೆ. ಅದರಲ್ಲೂ ಒಲಿಂಪಿಕ್ಸ್‌ಗೂ ಮುನ್ನ ಜರ್ಮನಿಯ ಕೋಚ್ ಯುವೆ ಹಾನ್ ಅವರ ಗರಡಿಯಲ್ಲಿ ಕಠಿಣ ತರಬೇತಿ ಪಡೆದಿದ್ದರು.

ನಿಮಗಿದು ಗೊತ್ತೇ? ಇತಿಹಾಸದಲ್ಲೇ 100 ಮೀಟರ್‌ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆದಿರುವ ವಿಶ್ವದ ಏಕೈಕ ಅಥ್ಲೀಟ್ ಯುವೆ ಹಾನ್ ಅವರಾಗಿದ್ದಾರೆ.

ಹೌದು, 1984ರಲ್ಲಿ ನಡೆದಿದ್ದ ಅಥ್ಲೆಟಿಕ್ಸ್ ಕೂಟವೊಂದರಲ್ಲಿ 104.80 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆದಿದ್ದರು. ಇದುವರೆಗೆ ಈ ದಾಖಲೆಯನ್ನು ಯಾವ ಸ್ಪರ್ಧಿಯಿಂದಲೂ ಮುರಿಯಲು ಸಾಧ್ಯವಾಗಿಲ್ಲ.

1986ರಲ್ಲಿ ಜಾವೆಲಿನ್ ಥ್ರೋದಲ್ಲಿ ಹೊಸ ನಿಯಮಗಳನ್ನು ಆಳವಡಿಸಲಾಯಿತು. ಇದರಿಂದಾಗಿ ದಾಖಲೆಗಳನ್ನು ಮರು ರೂಪಿಸಲಾಯಿತು.ಅಲ್ಲದೆ ಯುವೆ ಹಾನ್ ದಾಖಲೆ ಅಚ್ಚಳಿಯದೇ ಉಳಿದಿದೆ.

ಅವರು 1981ರ ಯುರೋಪಿಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 86.56 ಮೀಟರ್ ದೂರ ಜಾವೆಲಿನ್ ಎಸೆದು ಪ್ರಥಮ ಸ್ಥಾನ ಗಳಿಸಿದರು. 1982ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ 91.34 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು.

1983ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರಲಿಲ್ಲ. 1984ರ ಒಲಿಂಪಿಕ್ಸ್‌ ಅನ್ನು ಈಸ್ಟ್ ಜರ್ಮನಿ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಸ್ಪರ್ಧಿಸಿರಲಿಲ್ಲ. 1985ರಲ್ಲಿ ಐಎಎಎಫ್ ವಿಶ್ವಕಪ್ ಮತ್ತು ಯುರೋಪಿಯನ್ ಕಪ್‌ನಲ್ಲಿ ಜಯಭೇರಿ ಮೊಳಗಿಸಿದ್ದರು. ಆದರೆ 1986ರಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಹಿನ್ನಡೆ ಅನುಭವಿಸಿ ವೃತ್ತಿ ಜೀವನ ಕೊನೆಗೊಳಿಸಿದರು.

2017ರಲ್ಲಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ಜೊತೆಗಿನ ಒಪ್ಪಂದದಂತೆ ಟೋಕಿಯೊ ಒಲಿಂಪಿಕ್ಸ್ ವರೆಗೆ ನೀರಜ್ ಚೋಪ್ರಾ ಸೇರಿದಂತೆ ಭಾರತದ ಜಾವೆಲಿನ್ ಸ್ಪರ್ಧಿಗಳಿಗೆ ತರಬೇತಿ ನೀಡಲು ಸಹಿ ಹಾಕಿದ್ದರು. 2019ರ ವರೆಗೆ ಯುವೆ ಹಾನ್ ಬಳಿ ನೀರಜ್ ತರಬೇತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT