ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ ಬ್ಯಾಡ್ಮಿಂಟನ್‌ಗೆ ‌ವಿದಾಯ

‘ಸೂಪರ್‌ ಡಾನ್‌’ ಅಭಿದಾನಕ್ಕೆ ಪಾತ್ರರಾದ ತಾರೆ
Last Updated 4 ಜುಲೈ 2020, 7:23 IST
ಅಕ್ಷರ ಗಾತ್ರ

ಬೀಜಿಂಗ್‌: ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್,‌ ಚೀನಾದ ಬ್ಯಾಡ್ಮಿಂಟನ್‌ ತಾರೆ ಲಿನ್‌ ಡಾನ್‌ ಅವರು ಶನಿವಾರ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂಬ ಹೆಗ್ಗಳಿಕೆಯೂ ಅವರದು.

36 ವರ್ಷದ ಲಿನ್‌ ಅವರು 2008ರ ಬೀಜಿಂಗ್‌ ಹಾಗೂ 2012ರ ಲಂಡನ್‌ ಒಲಿಂಪಿಕ್‌ ಕ್ರೀಡೆಗಳ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಪದಕಕ್ಕೆ ಕೊರಳೊಡ್ಡಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಸ್ಪ‍ರ್ಧಿಸುತ್ತಿಲ್ಲ.

ಅವರ ಕಠಿಣ ಪ್ರತಿಸ್ಪರ್ಧಿ, ಗೆಳೆಯ ಮಲೇಷ್ಯಾದ ಲೀ ಚೊಂಗ್‌ ವಿ ಅವರು ನಿವೃತ್ತಿ ಘೋಷಿಸಿದ ವರ್ಷದ ಬಳಿಕ ಲಿನ್‌ ಕೂಡ ಗುಡ್‌ ಬೈ ಹೇಳಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಈ ಜೋಡಿ ಪಾರಮ್ಯ ಮೆರೆದಿತ್ತು. ಲಿನ್‌ ಇತ್ತೀಚೆಗಷ್ಟೇ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದರು.

ಆರಂಭದ ದಿನಗಳಲ್ಲಿ ‘ಬ್ಯಾಡ್‌ ಬಾಯ್‌’ ಎಂದು ಕರೆಸಿಕೊಳ್ಳುತದ್ದರು. ಲಿನ್‌ ಮೈಮೇಲೆ ಟ್ಯಾಟೂಗಳ ಚಿತ್ತಾರ ಇತ್ತು. 666 ಸಿಂಗಲ್ಸ್‌ ಪಂದ್ಯಗಳಲ್ಲಿ ಜಯಗಳಿಸಿರುವ ಶ್ರೇಯ ಹೊಂದಿದ್ದಾರೆ. ಸಾಕಷ್ಟು ಪ್ರಶಸ್ತಿಗಳು ಅವರ ಮಡಿಲು ಸೇರಿವೆ.

‘ಯಶಸ್ಸು ಹಾಗೂ ಕಷ್ಟದ ದಿನಗಳಲ್ಲಿ ನನ್ನ ಕುಟುಂಬ, ತರಬೇತುದಾರರು, ಸಹ ಆಟಗಾರರು ಹಾಗೂ ಅಭಿಮಾನಿಗಳು ನನ್ನ ಬೆನ್ನಿಗೆ ನಿಂತಿದ್ದಾರೆ. ಪ್ರತಿಯೊಂದು ಹೆಜ್ಜೆಯಲ್ಲೂ ವಿಜಯ ಸಾಧಿಸುವ ಬಯಕೆಯಿತ್ತು. ವೃತ್ತಿ ಬದುಕಿನುದ್ದಕ್ಕೂ ಆಟವನ್ನು ಪ್ರೀತಿಸಿದ್ದೇನೆ’ ಎಂದು ಟ್ವಿಟರ್‌ ಮಾದರಿಯ ಸಾಮಾಜಿಕ ಜಾಲತಾಣ ವೈಬೊದಲ್ಲಿ ಲಿನ್‌ ಹೇಳಿಕೊಂಡಿದ್ದಾರೆ.

ಐದು ಬಾರಿ ವಿಶ್ವ ಚಾಂಪಿಯನ್‌ ಕೂಡ ಆಗಿದ್ದ ಲಿನ್‌, ದೀರ್ಘಕಾಲ ವಿಶ್ವ ಬ್ಯಾಡ್ಮಿಂಟನ್‌ ಕ್ರಮಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು.

ಲಿನ್, ಕ್ರೀಡಾ ಜೀವನದ ಉತ್ತುಂಗದಲ್ಲಿದ್ದಾಗ ‘ಸೂಪರ್‌ ಡಾನ್‌’ ಎಂದು ಅಡ್ಡ ಹೆಸರು ಗಳಿಸಿದ್ದರು. ಗಾಯಗಳ ಕಾರಣಅವರ ಆಟವುಇತ್ತೀಚಿನ ವರ್ಷಗಳಲ್ಲಿ ಮಂಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT