ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸನ್ನು ನನಸು ಮಾಡಿಕೊಂಡ ಚಿನ್ನದ ಹುಡುಗ ನೀರಜ್ ಚೋಪ್ರಾ: ಭಾವನಾತ್ಮಕ ಟ್ವೀಟ್

Last Updated 11 ಸೆಪ್ಟೆಂಬರ್ 2021, 5:49 IST
ಅಕ್ಷರ ಗಾತ್ರ

ಬೆಂಗಳೂರು: ಟೋಕಿಯೊ ಓಲಿಂಪಿಕ್ಸ್‌ ಬಂಗಾರ ಪದಕ ವಿಜೇತ, ಚಿನ್ನದ ಹುಡುಗ ನೀರಜ್ ಚೋಪ್ರಾ ಹರಿಯಾಣದ ಸಾಮಾನ್ಯ ಕುಟುಂಬದಿಂದ ಬಂದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದರು.

ಜಾವೆಲಿನ್ ಥ್ರೋದಲ್ಲಿ ಶ್ರೇಷ್ಠ ಸಾಧನೆ ಮಾಡುವ ಮೂಲಕ ಭಾರತೀಯರ ಕನಸನ್ನು ನನಸು ಮಾಡಿರುವ ನೀರಜ್ ಚೋಪ್ರಾ, ಇದೀಗ ತಮ್ಮ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ.

ತಮ್ಮ ತಂದೆ–ತಾಯಿಯನ್ನು ವಿಮಾನ ಪ್ರಯಾಣ ಮಾಡಿಸಬೇಕು ಎಂದು ನೀರಜ್ ಚೋಪ್ರಾ ಕನಸು ಕಂಡಿದ್ದರಂತೆ. ಶನಿವಾರ ಬೆಳಿಗ್ಗೆ ಖಾಸಗಿ ಜೆಟ್ ಒಂದರಲ್ಲಿ ತಂದೆ ಸತೀಶ್ ಕುಮಾರ್ ತಾಯಿ ಸರೋಜಾ ದೇವಿ ಅವರನ್ನು ವಿಮಾನ ಪ್ರಯಾಣ ಮಾಡಿಸಿದ್ದಾರೆ. ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದ್ದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ 23 ವರ್ಷದ ಶ್ರೇಷ್ಠ ಕ್ರೀಡಾಪಟು, ‘ನನ್ನ ಬಹುದಿನದ ಸಣ್ಣ ಕನಸೊಂದು ಇಂದು ಈಡೇರಿದೆ. ನನ್ನ ತಂದೆ–ತಾಯಿಯ ಮೊದಲ ವಿಮಾನ ಪ್ರಯಾಣದ ಆಸೆ ಈಡೇರಿಸಿದ್ದೇನೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ‘ ಎಂದು ಟ್ವೀಟ್ ಮಾಡಿದ್ದಾರೆ.

ನೀರಜ್ ಚೋಪ್ರಾ ಅವರ ಈ ಭಾವನಾತ್ಮಕ ಟ್ವೀಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಈ ನಿಮ್ಮ ಸಂತಸದ ಮುಂದೆ ಬೇರೆ ಯಾವುದು ಸಮ ಅಲ್ಲ. ಶುಭವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT