ಭಾನುವಾರ, ಏಪ್ರಿಲ್ 18, 2021
24 °C
ಸುಕಾಂತ್‌ಗೆ ಬೆಳ್ಳಿ

ದುಬೈ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿ: ಪ್ರಮೋದ್ ಭಗತ್‌ಗೆ ಚಿನ್ನ ‘ಡಬಲ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಪ್ರಮೋದ್ ಭಗತ್ ಅವರು ದುಬೈ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯ   ಸಿಂಗಲ್ಸ್ ಹಾಗೂ ಡಬಲ್ಸ್‌ಗಳಲ್ಲಿ ಚಿನ್ನದ ಪದಕ ಗೆದ್ದರು.

ಭಾನುವಾರ ಇಲ್ಲಿ ನಡೆದ ಎಸ್‌ಎಲ್‌4 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಪ್ರಮೋದ್‌ 21-17, 21-18ರಿಂದ ಭಾರತದವರೇ ಆದ ನಿತೇಶ್ ಕುಮಾರ್ ಅವರನ್ನು ಮಣಿಸಿದರು.

ಮನೋಜ್ ಸರ್ಕಾರ್ ಜೊತೆಗೂಡಿದ ಪ್ರಮೋದ್‌ ಅವರು ಎಸ್‌ಎಲ್‌4–ಎಸ್‌ಎಲ್‌3 ವಿಭಾಗದ ಡಬಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 21-18, 21-16ರಿಂದ ಭಾರತದ ಸುಕಾಂತ್ ಕದಂ–ನಿತೇಶ್ ಕುಮಾರ್ ಜೋಡಿಯನ್ನು ಸೋಲಿಸಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಲಕ್ ಕೊಹ್ಲಿ ಜೊತೆಗೂಡಿದ ಪ್ರಮೋದ್ ಕಂಚಿನ ಪದಕ ಗೆದ್ದುಕೊಂಡರು.

ಎಸ್‌ಎಲ್3 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 15-21, 6-21ರಿಂದ ಫ್ರಾನ್ಸ್‌ನ ಲೂಕಾಸ್‌ ಮಾಜುರ್ ಅವರಿಗೆ ಸೋತ ಸುಕಾಂತ್ ಕದಂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು