ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸ್ಟರ್ ಸೆಮೆನ್ಯಾಗೆ ಸ್ವಿಟ್ಜರ್‌ಲೆಂಡ್ ಸುಪ್ರೀಂ ಕೋರ್ಟ್‌ನಲ್ಲಿ ಸೋಲು

Last Updated 9 ಸೆಪ್ಟೆಂಬರ್ 2020, 16:13 IST
ಅಕ್ಷರ ಗಾತ್ರ

ಜಿನಿವಾ: ಎರಡು ಒಲಿಂಪಿಕ್ಸ್‌ಗಳಲ್ಲಿ ಚಾಂಪಿಯನ್ ಆಗಿದ್ದ ಅಥ್ಲೀಟ್ ಕ್ಯಾಸ್ಟರ್ ಸೆಮೆನ್ಯಾ ಅವರು ಟೆಸ್ಟೊಸ್ಟೆರಾನ್ ನಿಯಮ ಪರಿಷ್ಕರಣೆಗಾಗಿ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ್ದ ಹೋರಾಟದಲ್ಲಿ ಸೋತಿದ್ದಾರೆ.

ಹೋದ ವರ್ಷದ ಸೆಮೆನ್ಯಾ ಅವರು ಹೋದ ವರ್ಷ ಕ್ರೀಡಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸ್ವಿಟ್ಜರ್‌ಲೆಂಡ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಟ್ರ್ಯಾಕ್ ಅಭಿವೃದ್ಧಿ ಮಂಡಳಿಯು ರೂಪಿಸಿರುವ ನಿಯಮದಲ್ಲಿ ಟೆಸ್ಟೊಸ್ಟಿರಾನ್ ಅಂಶವು ಹೆಚ್ಚು ಇರುವ ಮಹಿಳಾ ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ. ಅವರಲ್ಲಿ ಪುರುಷರ ಹಾರ್ಮೋನುಗಳು ಹೆಚ್ಚಿವೆ ಎಂದು ಗುರುತಿಸಿ ಮಹಿಳಾ ಸ್ಪರ್ಧೆಗಳಿಂದ ಕೈಬಿಡಲಾಗುತ್ತದೆ. ಈ ನಿಯಮವು ಸರಿಯಲ್ಲ ಎಂದು ಸೆಮೆನ್ಯಾ ಮೇಲ್ಮನವಿ ಸಲ್ಲಿಸಿದ್ದರು.

ಮಹಿಳೆಯರಲ್ಲಿ ಟೆಸ್ಟೊಸ್ಟಿರಾನ್ ಹಾರ್ಮೋನ್ ಅಂಶವು ನಿಗದಿಯ ಪ್ರಮಾಣಕ್ಕಿಂತ ಹೆಚ್ಚಾಗುವುದರಿಂದ ಅವರ ದೇಹದ ಮಾಂಸಖಂಡಗಳು ಮತ್ತು ಮೂಳೆಗಳು ಹೆಚ್ಚು ಬಲಶಾಲಿಯಾಗುತ್ತವೆ. ನಿಗದಿಯ ಪ್ರಮಾಣ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಟೆಸ್ಟೊಸ್ಟಿರಾನ್ ಅಂಶವು ಇರುವ ಮಹಿಳಾ ಅಥ್ಲೀಟ್‌ಗಳಿಗಿಂತ ಹೆಚ್ಚು ಸಮರ್ಥರಾಗುತ್ತಾರೆ. ಆದ್ದರಿಂದ ಹೆಚ್ಚು ಇರುವವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ.

‘ಈ ತೀರ್ಪಿನಿಂದ ತೀವ್ರ ಬೇಸರವಾಗಿದೆ. ಆದರೆ ಮಹಿಳಾ ಅಥ್ಲೀಟ್‌ಗಳ ಮಾನವ ಹಕ್ಕುಗಳಿಗೆ ಇದರಿಂದಾಗುತ್ತಿರುವ ಧಕ್ಕೆಯನ್ನು ವಿರೋಧಿಸಿ, ಹೋರಾಟ ಮುಂದುವರಿಸುತ್ತೇನೆ’ ಎಂದು ಸೆಮೆನ್ಯಾ ಪ್ರತಿಕ್ರಿಯಿಸಿದ್ದಾರೆ.

ಈ ನಿರ್ಣಯದಿಂದಾಗಿ ಸೆಮೆನ್ಯಾ ಅವರು ಹೋದ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಸೆಮೆನ್ಯಾ ಅವರು 2016ರ ರಿಯೊ ಒಲಿಂಪಿಕ್ಸ್‌ನ ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2017ರಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನ 800 ಮೀ ಮತ್ತು 1500 ಮೀ ಓಟಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT